ಪ್ರವಾದಿ ಬಗ್ಗೆ ನಿಂದನೆ: ಎಸ್ಸೆಸ್ಸೆಫ್ ಮುಡಿಪು ಸೆಕ್ಟರ್ ನಿಂದ ದೂರು

ಉಳ್ಳಾಲ, ಡಿ. 30: ಪ್ರವಾದಿ (ಸ.ಅ) ರವರನ್ನು ನಿಂದನೆ ಮಾಡಿದ ಸುವರ್ಣ ನ್ಯೂಸ್ ಚಾನಲ್ ನಿರೂಪಕ ಅಜಿತ್ ಹನುಮಕ್ಕನವರ್ ಹಾಗೂ ಸುವರ್ಣ ನ್ಯೂಸ್ ಚಾನಲ್ ವಿರುದ್ದ ಎಸ್ಸೆಸ್ಸೆಫ್ ಮುಡಿಪು ಸೆಕ್ಟರ್ ವತಿಯಿಂದ ಕೊಣಾಜೆ ಪೋಲಿಸ್ ಠಾಣೆಗೆ ದೂರು ನೀಡಲಾಗಿದೆ ಎಂದು ಎಸ್ಸೆಸ್ಸೆಫ್ ಮುಡಿಪು ಸೆಕ್ಟರ್ ಅಧ್ಯಕ್ಷ ರಫೀಕ್ ಮದನಿ ಪಾನೆಲ ತಿಳಿಸಿದ್ದಾರೆ.
ಈ ಸಂದರ್ಭ ಎಸ್ಸೆಸ್ಸೆಫ್ ರಾಜ್ಯ ಸಮಿತಿ ಸದಸ್ಯ ಇಸ್ಮಾಯಿಲ್ ಮಾಸ್ಟರ್ ಮೊಂಟೆಪದವು, ಎಸ್ಸೆಸ್ಸೆಫ್ ಉಳ್ಳಾಲ ಡಿವಿಷನ್ ಕೋಶಾಧಿಕಾರಿ ಶರೀಫ್ ಮುಡಿಪು, ಕ್ಯಾಂಪಸ್ ಕಾರ್ಯದರ್ಶಿ ಇಲ್ಯಾಸ್ ಪೊಟ್ಟೊಳಿಕೆ ಮೊದಲಾದವರು ಉಪಸ್ಥಿತರಿದ್ದರು.
Next Story