ಪ್ರವಾದಿಯನ್ನು ನಿಂದನೆ ಮಾಡಿದ ಅಜಿತ್ ನನ್ನು ಬಂಧಿಸಿ: ಅನ್ಸಾರ್ ಪೈಝಿ

ಮಂಗಳೂರು, ಡಿ. 30: ಸುವರ್ಣ ಟಿವಿ ಚಾನೆಲ್ ನಿರೂಪಕ ಅಜಿತ್ ಪ್ರವಾದಿ ಪೈಗಂಬರ್ ಮತ್ತು ಇಸ್ಲಾಮ್ ಧರ್ಮವನ್ನು ನಿಂಧಿಸಿ ಹೇಳಿಕೆ ನೀಡಿದ್ದನ್ನು ಖಂಡಿಸಿ ಕಣ್ಣೂರು ಜುಮ್ಮಾ ಮಸೀದಿ ವತಿಯಿಂದ ಪ್ರತಿಭಟನೆ ನಡೆಯಿತು.
ಈ ಸಂದರ್ಭ ಮಾತನಾಡಿದ ಮಸೀದಿಯ ಖತೀಬ್ ಅನ್ಸಾರ್ ಪೈಝಿ ಪ್ರವಾದಿ ಮುಹಮ್ಮದ್ ಪೈಗಂಬರ್ ಅವರನ್ನು ಲೋಕ ಮುಸ್ಲಿಮರು ಎಲ್ಲಕ್ಕಿಂತ ಹೆಚ್ಚಾಗಿ ಪ್ರೀತಿಸುವವರಾಗಿದ್ದು ಮಾತ್ರವಲ್ಲದೇ ಕಡ್ಡಾಯ ಕರ್ಮದ ವಿಶ್ವಾಸದ ಭಾಗವಾಗಿ ಲೋಕ ಮುಸ್ಲಿಮರು ಅನುಸರಿಸುತ್ತಿದ್ದಾರೆ. ಪ್ರಪಂಚದ ಒಳಿತಿಗಾಗಿ ಪ್ರವಾದಿ ಮಹಮ್ಮದ್(ಸ ಅ) ಬಂದಿದ್ದಾರೆ. ಹೀಗಿರುವಾಗ ಪ್ರವಾದಿಯನ್ನು, ಇಸ್ಸಾಮ್ ಧರ್ಮವನ್ನು ನಿಂದಿಸಿದ ಸುವರ್ಣ ಟಿವಿ ನಿರೂಪಕ ಅಜಿತ್ ಸರ್ವ ಮುಸ್ಲಿಮ್ ಸಮುದಾಯದ ಧಾರ್ಮಿಕ ನಂಬಿಕೆಗೆ ಘಾಸಿಯನ್ನುಂಟು ಮಾಡಿದ್ದಾರೆ. ಇಂತಹ ವಿಕೃತ ಮನಸ್ಸಿನ ನಿರೂಪಕ ಮತ್ತು ಸುವರ್ಣ ಟಿವಿ ಚಾನೆಲ್ ವಿರುದ್ಧ ಸರಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಮಸೀದಿ ಅಧ್ಯಕ್ಷ ಅಬ್ದುಲ್ ರಹಿಮಾನ್ ಸೀಝರ್, ಕಾರ್ಯದರ್ಶಿ ಎಕೆ ಇಕ್ಬಾಲ್, ಉಪಾಧ್ಯಕ್ಷ ಹಮೀದ್ ಕೆ.ಎಸ್.ಎಚ್, ಮಹಮ್ಮದ್ ಹಾಜಿ ಡಿಎನ್, ನಸೀಮ ಅಬ್ದುಲ್ ರಹಿಮಾನ್ ಹಾಜಿ ಹಾಗೂ ಯುನೈಟೆಡ್ ಕಣ್ಣೂರು ಮತ್ತು ಜಮಾತಿನ ಸದಸ್ಯರು ಭಾಗವಹಿಸಿದರು.