ಸುಲ್ತಾನ್ ಟ್ರೋಫಿ-2018: ಯಂ.ಯಂ ಚಾಲೇಂಜರ್ಸ್ ಚಾಂಪಿಯನ್

ಕುಂದಾಪುರ, ಡಿ. 30: ಕೋಟ ಪಡುಕರೆ ಇಲ್ಲಿನ ನಜಾತ್ ಯಂಗ್ ಮೆನ್ಸ್ ವತಿಯಿಂದ ನಡೆದ ಸುಲ್ತಾನ್ ಟ್ರೋಫಿ-2018 ಕ್ರಿಕೆಟ್ ಪಂದ್ಯಾಟದಲ್ಲಿ ಯಂ.ಯಂ ಚಾಲೇಂಜರ್ಸ್ ತಂಡ ಚಾಂಪಿಯನ್ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು.
ಬಿಕೆ ಬಾಯ್ಸ್, ಪಡುಕರೆಬುಲ್ಸ್, ಮಸ್ಕತ್ ವಾರಿಯರ್ಸ್, ಯಂ.ಯಂ ಚಾಲೆಂಜರ್ಸ್ ಎಂಬ ನಾಲ್ಕು ತಂಡಗಳು ಸೆಣಸಾಟ ನಡೆಸಿದ ಪಂದ್ಯಾಟದಲ್ಲಿ ಪಡುಕರೆ ಬುಲ್ಸ್ ರನ್ನರ್ ಆಫ್ ಆಯಿತು.
ವಿಜೇತರಿಗೆ ಕೊನೆಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಟ್ರೋಫಿ ಮತ್ತು ನಗದು ಪುರಸ್ಕಾರ ನೀಡಲಾಯಿತು. ಇದೇ ವೇಳೆಯಲ್ಲಿ ಪಂದ್ಯಾಟ ನಡೆಸಲು ಎಲ್ಲಾ ರೀತಿಯಲ್ಲೂ ಸಹಕರಿಸಿದ ಮೊಯಿದಿನ್ ಬ್ಯಾರಿ ಹಾಗೂ ಶಾಬಾನ್ ಇವರನ್ನು ಸನ್ಮಾನಿಸಲಾಯಿತು.
Next Story