ಪ್ರವಾದಿ ನಿಂದನೆ:ಎಸ್ಸೆಸ್ಸೆಫ್ ಮಂಜನಾಡಿ ಸೆಕ್ಟರ್ ನಿಂದ ದೂರು

ಉಳ್ಳಾಲ, ಡಿ.31: ಪ್ರವಾದಿ (ಸ.ಅ) ರವರನ್ನು ನಿಂದನೆ ಮಾಡಿ ಕೋಮು ಸಂಘರ್ಷಕ್ಕೆ ಪ್ರಚೋದನೆ ಮಾಡುವ ರೀತಿಯಲ್ಲಿ ಮಾಧ್ಯಮದ ಸಿದ್ದಾಂತಕ್ಕೆ ಅಗೌರವ ತೋರಿದ ಟಿವಿವಾಹಿನಿ ನಿರೂಪಕ ಅಜಿತ್ ಹನುಮಕ್ಕನವರ್ ಹಾಗೂ ಸುವರ್ಣ ನ್ಯೂಸ್ ಚಾನಲ್ ವಿರುದ್ದ ಎಸ್ಸೆಸ್ಸೆಫ್ ಮಂಜನಾಡಿ ಸೆಕ್ಟರ್ ವತಿಯಿಂದ ಎಸ್ಸೆಸ್ಸೆಫ್ ಮಂಜನಾಡಿ ಸೆಕ್ಟರ್ ಅಧ್ಯಕ್ಷ ಇಬ್ರಾಹಿಂ ಅಹ್ಸನಿ ನೇತೃತ್ವದಲ್ಲಿ ಕೊಣಾಜೆ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಲಾಯಿತು.
ಈ ಸಂದರ್ಭ ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಮೊಯ್ದಿನ್ ಮೋರ್ಲ, ಸೆಕ್ಟರ್ ನಾಯಕರಾದ ಹಮೀದ್ ಬಂಡಸಾಲೆ, ಹಸೈನಾರ್ ಝುಹ್ರಿ ಮೋರ್ಲ, ಶರೀಫ್ ಕಲ್ಕಟ್ಟ, ಅನೀಸ್ ಕೊಳ್ಳರಕೋಡಿ, ಮುನೀರ್ ಕಲ್ಮಿಂಜ, ಝಾಹಿದ್ ಸಾರ್ತಬೈಲ್, ಶಬೀರ್ ಕೊಳ್ಳರಕೋಡಿ, ರಝೀನ್ ಕಲ್ಕಟ್ಟ, ಆಮಿರ್ ಕೊಳ್ಳರಕೋಡಿ,ಇರ್ಶಾದ್ ಮುಸ್ಲಿಯಾರ್ ಮಂಜನಾಡಿ, ಫಾರೂಕ್ ಸುನ್ನಂಗಳ, ಅಶ್ರಫ್ ಕಲ್ಕಟ್ಟ, ಹಕೀಂ ಮುಸ್ಲಿಯಾರ್ ಅನ್ಸಾರ್ ನಗರ, ಲತೀಫ್ ಮೋರ್ಲ, ಸಫ್ವಾನ್ ಕಲ್ಕಟ್ಟ. ಹಾಗೂ ಎಸ್.ವೈ.ಎಸ್. ಮುಖಂಡರಾದ ಇಸ್ಮಾಯೀಲ್ ಮೋರ್ಲ, ರವೂಫ್ ಮೋರ್ಲ ಮೊದಲಾದವರು ಉಪಸ್ಥಿತರಿದ್ದರು.