ಮ್ಯಾಕೋ ಕೋ-ಆಪರೇಟಿವ್ ಸೊಸೈಟಿಯ ತೊಕ್ಕೊಟ್ಟು ಶಾಖೆ ಉದ್ಘಾಟನೆ

ಮಂಗಳೂರು, ಡಿ.31: ಮ್ಯಾಕೋ ಕೋ-ಆಪರೇಟಿವ್ ಸೊಸೈಟಿಯ ತೊಕ್ಕೊಟ್ಟು ಶಾಖೆಯನ್ನು ರವಿವಾರದ.ಕ.ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು ಗ್ರಾಮಾಂತರ ಜನರಿಗೆ ಸಹಕಾರ ಸಂಘಗಳು ಆಶಾಕಿರಣವಾಗಿದೆ. ಹಾಗಾಗಿ ಸಹಕಾರ ಸಂಘಗಳು ಜನರಿಗೆ ಉತ್ತಮ ಸೇವೆ ಸಲ್ಲಿಸಬೇಕು ಎಂದರು.
ವಿಧಾನ ಪರಿಷತ್ ಸದಸ್ಯ ಹಾಗೂ ಮ್ಯಾಕೋ ಸೊಸೈಟಿಯ ಅಧ್ಯಕ್ಷ ಐವನ್ ಡಿಸೋಜ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ 25 ಹಿರಿಯ ರಿಕ್ಷಾ ಚಾಲಕರನ್ನು ಸನ್ಮಾನಿಸಲಾಯಿತು. ಅಲ್ಲದೆ ಠೇವಣಿದಾರರಿಗೆ ಅಭಿನಂದಿಸಲುತು. ನಿತ್ಯಾಧರ್ ಚರ್ಚ್‌ನ ಧರ್ಮಗುರು ರೆ.ಫಾ.ಇಲ್ಯಾಸ್ ಡಿಸೋಜ ಆಶೀರ್ವಚನ ನೀಡಿದರು.
ಅತಿಥಿಯಾಗಿ ಸಾರ್ಜಂಟ್ ಚರ್ಚ್‌ನ ಧರ್ಮಗುರು ರೆ.ಜೆ.ಜಯಕುಮಾರ್ ಕೋಟ್ಯಾನ್ ಹಾಗೂ ಸಹಕಾರಿ ಸಂಘದ ನಿಬಂಧಕ ಬಿ.ಕೆ.ಸಲೀಂ ಭಾಗವಹಿಸಿದ್ದರು. ಸಭೆಯಲ್ಲಿ ರಾಜೇಶ್ ಯು.ಬಿ., ದಿನೇಶ್ ಕುಂಪಲ, ದಯಾನಂದ್, ಪ್ರವೀಣ್ ಕುಮಾರ್ ಉಪಸ್ಥಿತರಿದ್ದರು.
Next Story