ಉಳ್ಳಾಲ: ಜ.10ರವರೆಗೆ ನಸೀಅತ್ ಸಿಲ್‌ಸಿಲಾ
ಮಂಗಳೂರು, ಡಿ. 31: ಉಳ್ಳಾಲ ಮೇಲಂಗಡಿಯ ಎಸ್‌ವೈಎಸ್ ಆ್ಯಂಡ್ ಎಸೆಸ್ಸೆಫ್ ಇದರ ಜಂಟಿ ಆಶ್ರಯದಲ್ಲಿ ಉಳ್ಳಾಲ ಮೇಲಂಗಡಿಯ ಬಿಸ್ಮಿಲ್ಲಾ ಕಾಂಪೌಂಡ್‌ನ ತಾಜುಲ್ ಉಲಮಾ ವೇದಿಕೆಯ ಪಿ.ಎ.ಉಸ್ತಾದ್ ಸಭಾಂಗಣದಲ್ಲಿ ರವಿವಾರದಿಂದ ಆರಂಭಗೊಂಡಿರುವ ಮುಹಬ್ಬತೇ ಜೀಲಾನಿ ನಸೀಅತ್ ಸಿಲ್‌ಸಿಲಾ ಕಾರ್ಯಕ್ರಮ ಜನವರಿ 10ರವರೆಗೆ ಜರುಗಲಿದೆ.
ಜ.1ರಂದು ಮಹ್‌ಳರತುಲ್ ಬದ್ರಿಯಾ, ಜ.2ರಂದು ಜೀಲಾನಿಯ್ಯಿ ಪ್ರಭಾಷಣ, ಜ.3ರಂದು ಮುಹಿಯ್ಯುದ್ದೀನ್ ಮಾಲೆ, ಜ.4ರಂದು ಮುದುಗುಡ ಅಬ್ದುಲ್ ಖಾದರ್ ಸಖಾಫಿ ಕಣ್ಣೂರು ಅವರ ಮತಪ್ರಭಾಷಣ, ಜ.5ರಂದು ನೌಫಲ್ ಸಖಾಫಿ ಕಳಸ ಅವರ ಮತಪ್ರಭಾಷಣ, ಜ.6ರಂದು ಬುರ್ದಾ ಮಜ್ಲಿಸ್, ಜ.7ರಂದು ಟಿ.ಎಂ. ಮುಹಿಯ್ಯುದ್ದೀನ್ ಕಾಮಿಲ್ ಸಖಾಫಿ ತೋಕೆ ಅವರ ಮತಪ್ರಭಾಷಣ, ಜ.8ರಂದು ಸೈಯದ್ ಮದನಿ ಮತ್ತು ತಾಜುಲ್ ಉಲಮಾ ವೌಲಿದ್, ಜ.9ರಂದು ಅಬ್ದುಲ್ಲತೀಫ್ ಸಖಾಫಿ ಕಾಂತಾಪುರಂ ಅವರಿಂದ ಹುಬ್ಬುರ್ರಸುಲ್ ಪ್ರಭಾಷಣ, ಜ.10ರಂದು 2ನೆ ವಾರ್ಷಿಕ ಜಲಾಲಿಯ್ಯಿ ರಾತೀಬ್ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.
Next Story