ನೆಲಮಂಗಲ: ಚಾಕುವಿನಿಂದ ಇರಿದು ಕೊಲೆ
ಬೆಂಗಳೂರು, ಡಿ.31: ಪೊಲೀಸ್ ಠಾಣೆಗೆ ದೂರು ನೀಡಿದ ಕಾರಣದಿಂದ ಕೋಪಗೊಂಡು ತನ್ನ ಭಾವನನ್ನೇ ಚಾಕುವಿನಿಂದ ಇರಿದು ಕೊಲೆ ಮಾಡಿ ಭಾಮೈದ ಪರಾರಿಯಾಗಿರುವ ಘಟನೆ ನೆಲಮಂಗಲದ ದೇವಾಂಗ ಬೀದಿಯಲ್ಲಿ ನಡೆದಿದೆ.
ಇಲ್ಲಿನ ಗಣೇಶ್(40) ಎಂಬುವವರನ್ನು ಭಾಮೈದ ಆನಂದ್ ಕೊಲೆ ಮಾಡಿ ಪರಾರಿಯಾಗಿದ್ದಾನೆ. ಪ್ರತಿನಿತ್ಯ ಕುಡಿದು ಗಲಾಟೆ ಮಾಡುತ್ತಾನೆ ಎಂದು ಮತ ಗಣೇಶ್ ನೆಲಮಂಗಲ ಪೊಲೀಸ್ ಠಾಣೆಗೆ ಆನಂದ್ ವಿರುದ್ಧ ದೂರು ನೀಡಿದ್ದ ಎನ್ನಲಾಗಿದೆ.
ದೂರು ನೀಡಿದ್ದರಿಂದ ಕೋಪಗೊಂಡಿದ್ದ ಆನಂದ್ ಕುಡಿದು ಬಂದು ಗಣೇಶ್ ಜೊತೆ ಜಗಳವಾಡಿದ್ದಾನೆ. ಜಗಳ ಕೋಪಕ್ಕೆ ತಿರುಗಿದಾಗ ರೊಚ್ಚಿಗೆದ್ದ ಆನಂದ್ ಗಣೇಶ್‌ಗೆ ಚಾಕುನಿಂದ ಇರಿದು ಕೊಲೆಗೈದು ಪರಾರಿಯಾಗಿದ್ದಾನೆ. ಕೊಲೆ ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಆರೋಪಿ ಆನಂದ್‌ಗಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.
Next Story