ಎ.ಬಿ. ಇಬ್ರಾಹಿಂ ಸಹಿತ ನಾಲ್ವರು ಐಎಎಸ್ ಅಧಿಕಾರಿಗಳಿಗೆ ಭಡ್ತಿ

ಎ.ಬಿ. ಇಬ್ರಾಹಿಂ
ಬೆಂಗಳೂರು, ಡಿ.31: ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ವಾಣಿಜ್ಯ ನಿಗಮ (ಕೆಯುಐಡಿಎಫ್ಸಿ), ಬೆಂಗಳೂರು ಇದರ ವ್ಯವಸ್ಥಾಪನಾ ನಿರ್ದೇಶಕರಾಗಿರುವ ಎ.ಬಿ.ಇಬ್ರಾಹಿಂ ಸಹಿತ ನಾಲ್ವರು ಐಎಎಸ್ ಅಧಿಕಾರಿಗಳಿಗೆ ಐಎಎಸ್ ಸೂಪರ್ಟೈಮ್ ಮಾನದಂಡ ಪ್ರಕಾರ ವೇತನ ಭಡ್ತಿ ನೀಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಬೆಂಗಳೂರು ಇದರ ವಿಶೇಷ ಚುನಾವಣಾ ಆಯುಕ್ತರಾಗಿರುವ ಮನೋಜ್ ಕುಮಾರ್ ಮೀನಾ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಬೆಂಗಳೂರು ಇದರ ವ್ಯವಸ್ಥಾಪನಾ ನಿರ್ದೇಶಕ ಶಿವಯೋಗಿ ಸಿ.ಕಲಸದ್ ಹಾಗೂ ಕರ್ನಾಟಕ ಆಹಾರ ಮತ್ತು ನಾಗರಿಕ ಪೂರೈಕೆ ನಿಗಮ ನಿಯಮಿತ ಇದರ ವ್ಯವಸ್ಥಾಪನಾ ನಿರ್ದೇಶಕ ಕೆ. ಹೇಮಾಜಿ ನಾಕ್ ಅವರಿಗೂ ಐಎಎಸ್ ಸೂಪರ್ಟೈಮ್ ಮಾನದಂಡ ಪ್ರಕಾರ ವೇತನ ಭಡ್ತಿ ನೀಡಿಲಾಗಿದೆ.
ಈ ಆದೇಶವು ಜನವರಿ 1, 2019ರಿಂದ ಜಾರಿಗೆ ಬರಲಿದೆ ಎಂದು ಸರಕಾರಿ ಪ್ರಕಟನೆ ತಿಳಿಸಿದೆ.
Next Story





