ಸರಕಾರಿ ಶಾಲಾ ಕಾಲೇಜು ಬಲಗೊಂಡರೆ ದೇಶದ ಅಭಿವೃದ್ಧಿ: ಕಾಡಪ್ಪ
ಸಕಲೇಶಪುರ 3ನೇ ತಾಲ್ಲೂಕು ಎಸ್ ಎಫ್ ಐ ಸಮ್ಮೇಳನ
ಸಕಲೇಶಪುರ, ಡಿ. 31: ಸರಕಾರಿ ಶಾಲಾ ಕಾಲೇಜುಗಳನ್ನು ಬಲಗೊಳಿಸದೆ ದೇಶದ ಅಭಿವೃದ್ಧಿ ಅಸಾದ್ಯ ಎಂದು ಪುರಸಭೆ ಸದಸ್ಯ ಹಾಗೂ ದಲಿತ ಮುಖಂಡ ಕಾಡಪ್ಪ ಮಾತನಾಡುತ್ತಾ ಹೇಳಿದರು.
ಪಟ್ಟಣದ ಬೀಮ ಸಮೂದಾಯ ಭವನದಲ್ಲಿ ನಡೆದ ಎಸ್ ಎಫ್ 3ನೇ ತಾಲ್ಲೂಕು ಸಮ್ಮೇಳನ ಉದ್ಘಾಟಿಸಿ ಮಾತನಾಡುತ್ತಾ, ದೇಶದಲ್ಲಿ ಶಿಕ್ಷಣದ ಖಾಸಗಿ ಕರಣ ಹೆಚ್ಚುತ್ತಿದೆ ಬಡವ ಮತ್ತು ಶ್ರೀಮಂತ ವಿಧ್ಯಾರ್ಥಿಗಳಲ್ಲಿ ಶಿಕ್ಷಣದ ಅಸಮಾನತೆ ಹೆಚ್ಚಾಗುತ್ತಿದೆ ಎಂದರು.
ಶಿಕ್ಷಣವನ್ನು ರಾಷ್ಟ್ರೀಕರಣ ಮಾಡಬೇಕು ಏಕರೂಪ ಶಿಕ್ಷಣ ವ್ಯವಸ್ಥೆ ಜಾರಿಯಾಗಬೇಕು. ಸರ್ವರಿಗೂ ಗುಣಮಟ್ಟದ ವೈಜ್ಞಾನಿಕ ಉಚಿತ ಶಿಕ್ಷಣ ಸಿಕ್ಕಾಗ ಮಾತ್ರ ದೇಶ ಅಭಿವೃದ್ಧಿಯಾಗಲು ಸಾದ್ಯ ಎಂದು ಹೇಳಿದರು.
ಇಂದಿನ ವಿದ್ಯಾರ್ಥಿಗಳು ದೇಶ ಕಟ್ಟುಲು ಮುಂದಾಗಬೇಕು ಮತ್ತು ಸೌಹಾರ್ದತೆಯಿಂದ ಬಾಳಬೇಕು. ಸರಕಾರಿ ಶಾಲಾ ಕಾಲೇಜುಗಳ ಸಮರ್ಪಕ ಅಬಿವೃದ್ಧಿ ಗಾಗಿ ಮತ್ತ ಹಾಸ್ಟಲ್ಗಳಲ್ಲಿ ಮೂಲಭೂತ ಸೌಕರ್ಯಗಳಿಗೆ ದ್ವನಿ ಎತ್ತಬೇಕು ಎಂದರು.
ಸಮ್ಮೇಳನಕ್ಕೆ ಹಲವಾರು ಶಾಲಾ ಕಾಲೇಜುಗಳಿಂದ ವಿದ್ಯಾರ್ಥಿ ಪ್ರತಿನಿಧಿಗಳು ಭಾಗಹಿಸಿದ್ದರು. ಇತ್ತೀಚಿಗೆ ಯುವಕರನ್ನು ದಿಕ್ಕು ತಪ್ಪಿಸುವ ಕೆಲಸಗಳು ನಡೆಯುತ್ತಿದ್ದು ಇಂದಿನ ಯುವಜನತೆ ಎಚ್ಚರಿಕೆಯಿಂದ ಎಲ್ಲವನ್ನು ಎದುರಿಸಬೇಕೆಂದು ವಿದ್ಯಾರ್ಥಿಗಳಿಗೆ ಸಂದೇಶ ನೀಡಿದರು, ಸರಕಾರಿ ಶಾಲಾ ಕಾಲೇಜುಗಳನ್ನು ಸರಿಯಾಗಿ ಬಳಸಿಕೊಂಡು ತಮ್ಮ ಜೀವನವನ್ನು ಕಟ್ಟಿಕೊಳ್ಳಬೇಕು ಇಂದಿನ ಜಾಗತಿಕ ವಿದ್ಯಮಾನಗಳ ವಿರುದ್ಧ ಸುಭದ್ರವಾದ ಚಳುವಳಿ ರೂಪಿಸಿ ರೈತ ಕಾರ್ಮಿಕರ ಹಿತ ಕಾಪಾಡಲು ವಿದ್ಯಾರ್ಥಿ ಯುವ ಜನರು ಮುಂದಾಗಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ಎಸ್ ಎಫ್ ಐ ಜಿಲ್ಲಾದ್ಯಕ್ಷರಾದ ಮಹೇಶ್, ಸಹ ಕಾರ್ಯದರ್ಶಿ ರಮೇಶ್, ಮನೋಹರ್ ಪ್ರಮಿತ, ವಿಜಯ್ ಅರುಣ್, ತಾಲ್ಲೂಕು ಅಧ್ಯಕ್ಷ ಅಬ್ದುಲ್ಲಾ, ಕಾರ್ಯದರ್ಶಿ ರುಜಿತ ಉಪಸ್ಥಿತಿರಿದ್ದರು.
ಎಸ್ ಎಫ್ ಐ ನ 3ನೇ ತಾಲ್ಲೂಕ ಸಮ್ಮೇಳನದಲ್ಲಿ ನೂತನ ಸಮಿತಿಯನ್ನು ಆಯ್ಕೆ ಮಾಡಲಾಯಿಸಿತು ತಾಲ್ಲೂಕು ಕಾರ್ಯದರ್ಶಿಯಾಗಿ ವಿಜಯ್, ಅಧ್ಯಕ್ಷರಾಗಿ ರುಚಿತ, ಸಹಕಾರ್ಯದರ್ಶಿಯಾಗಿ ಶಶಿಧರ್, ಉಪಾದ್ಯಕರುಗಳಾಗಿ ಭೂಮಿಕ.ಉಮೇಶ್ .ಸಾದಿಕ್, ಉಮೇಶ್ , ಗಾಯತ್ರಿ ಇರ್ಷಾದ್, ಮೋಹನ್ ನೂತನ ಸಮಿತಿಯ ಪಧಾದಿಕಾರಿಗಳಾಗಿ ಆಯ್ಕೆಯಾಗಿರುತ್ತಾರೆ.







