ಪ್ರವಾದಿ ನಿಂದನೆ: ಅಸೈಗೋಳಿಯಲ್ಲಿ ಪ್ರತಿಭಟನೆ

ಕೊಣಾಜೆ, ಡಿ. 31: ಪ್ರವಾದಿ ಅವರು ಮಾನವ ಸಮುದಾಯಕ್ಕೆ ಉಪದೇಶ ನೀಡುವ ಮೂಲಕ ಧರ್ಮದ ಬೆಳವಣಿಗೆಗೆ ಕಾರಣಕರ್ತರಾದವರು. ಅವರು ಮುಸ್ಲಿಂ ಸಮುದಾಯದ ಕಾರಣೀಕೃತ ನೇತರರಾಗಿದ್ದಾರೆ. ಅವರನ್ನು ನಿಂದಿಸಿ ಹೇಳಿಕೆ ನೀಡಿದ ಸುವರ್ಣ ನ್ಯೂಸ್ ಚಾನೆಲ್‍ನ ಅಜಿತ್ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಪನೀರ್ ಮಸೀದಿ ಖತೀಬ್ ಯಾಸಿರ್ ಅರಾಫತ್ ಕೌಸರಿ ಒತ್ತಾಯಿಸಿದರು.
ಅವರು ಪ್ರವಾದಿಯವರನ್ನು ಅವಹೇಳನಕಾರಿಯಾಗಿ ನಿಂದಿಸಿದ ಸುವರ್ಣ ಚಾನೆಲ್‍ನ ಅಜಿತ್ ಮತ್ತು ಶ್ರೀರಾಮ ಬಗ್ಗೆ ಲಘುವಾಗಿ ಮಾತನಾಡಿದ ಭಗವಾನ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಅಸೈಗೋಳಿಯಲ್ಲಿ ನಡೆದ ಅಸೈಯ ನಮ್ಮನಾಡು ನಮ್ಮದು ವಾಟ್ಸಾಪ್ ಗ್ರೂಪ್‍ನ ಸದಸ್ಯರ ಪ್ರತಿಭಟನೆಯಲ್ಲಿ ಮಾತನಾಡಿದರು.
ಈ ಸಂದರ್ಭ ಮುಖಂಡ ಫಝಲ್ ಅಸೈಗೋಳಿ, ಎನ್.ಎಸ್ ಕರೀಂ, ನಿಯಾಝ್ ಸಾಮಣಿಗೆ, ಮಹಮ್ಮದ್ ಅಸೈ, ಅಸ್ಗರ್, ಸುಲೈಮಾನ್ ಹಾಜಿ ಮೊದಲಾದವರು ಉಪಸ್ಥಿತರಿದ್ದರು.
Next Story





