ಸ್ಮತಿ ಮಂಧಾನ ಐಸಿಸಿ ವರ್ಷದ ‘ಮಹಿಳಾ ಕ್ರಿಕೆಟರ್’

ದುಬೈ, ಡಿ.31: ಪ್ರತಿಭಾವಂತೆ ಭಾರತ ಮಹಿಳಾ ಕ್ರಿಕೆಟ್ ತಂಡದ ಉಪನಾಯಕಿ ಸ್ಮತಿ ಮಂಧಾನ ಅವರಿಗೆ ಸೋಮವಾರ ಐಸಿಸಿ ವರ್ಷದ ‘ಮಹಿಳಾ ಕ್ರಿಕೆಟರ್’ ಹಾಗೂ ‘ಮಹಿಳಾ ಏಕದಿನ ತಂಡದ ವರ್ಷದ ಆಟಗಾರ್ತಿ’ ಪ್ರಶಸ್ತಿ ಸಂದಿವೆೆ.
ಭಾರತದ ಎಡಗೈ ಬ್ಯಾಟ್ಸ್‌ವುಮನ್ ಮಂಧಾನ, ವರ್ಷದ ಮಹಿಳಾ ಕ್ರಿಕೆಟ್ ಆಟಗಾರ್ತಿಗೆ ಸಲ್ಲುವ ರಾಚೆಲ್ ಹೇಯೊ ಫ್ಲಿಂಟ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಸ್ಮತಿ 2018ರ ವರ್ಷದಲ್ಲಿ 12 ಏಕದಿನ ಪಂದ್ಯಗಳಿಂದ 669 ರನ್ ಹಾಗೂ 25 ಟಿ20 ಪಂದ್ಯಗಳಿಂದ 622 ರನ್ ಗಳಿಸಿದ್ದಾರೆ.
ಮಂಧಾನ ಸದ್ಯ ಐಸಿಸಿ ಮಹಿಳಾ ಏಕದಿನ ರ್ಯಾಂಕಿಂಗ್‌ನಲ್ಲಿ 4ನೇ ಸ್ಥಾನದಲ್ಲಿದ್ದು, ಟಿ20 ರ್ಯಾಂಕಿಂಗ್‌ನಲ್ಲಿ 10ನೇ ಸ್ಥಾನದಲ್ಲಿದ್ದಾರೆ. 2017ರಲ್ಲಿ ಬೌಲರ್ ಜೂಲನ್ ಗೋಸ್ವಾಮಿ ವರ್ಷದ ಕ್ರಿಕೆಟರ್ ಆಗಿದ್ದರು.ಅವರ ನಂತರ ಈ ಪ್ರಶಸ್ತಿ ಪಡೆಯುತ್ತಿರುವ ಭಾರತದ ಎರಡನೇ ಆಟಗಾರ್ತಿ ಮಂಧಾನ.
Next Story





