ಬೈಕ್-ಕಾರು ಅಪಘಾತ; ಬೈಕ್ ಸವಾರನಿಗೆ ಗಾಯ

ಮಂಗಳೂರು, ಡಿ.31: ನಗರದ ನಂತೂರು ಜಂಕ್ಷನ್‌ನಲ್ಲಿ ಬೈಕೊಂದಕ್ಕೆ ವಿರುದ್ಧ ದಿಕ್ಕಿನಿಂದ ಬಂದ ಕಾರು ಢಿಕ್ಕಿಯಾದ ಪರಿಣಾಮ ಬೈಕ್ ಸವಾರ ಗಂಭೀರ ಗಾಯಗೊಂಡು ನಗರದ ಖಾಸಗಿ ಆಸ್ಪತ್ರೆಗೆ ದಾಖಲಾದ ಘಟನೆ ಸೋಮವಾರ ಸಂಜೆ ನಡೆದಿದೆ.
ಕೊಟ್ಟಾರ ನಿವಾಸಿ ಕೃಷ್ಣ ಆಚಾರ್ಯ ಗಾಯಗೊಂಡವರು. ಇವರು ಸೋಮವಾರ ಸಂಜೆ 4:30ರ ವೇಳೆಗೆ ಬೈಕ್‌ನಲ್ಲಿ ನಂತೂರಿನಿಂದ ಪಂಪ್‌ವೆಲ್ ಕಡೆಗೆ ಹೋಗುತ್ತಿದ್ದರು. ಕೇರಳ ನೋಂದಣಿಯ ಕಾರೊಂದು ವಿರುದ್ಧ ದಿಕ್ಕಿನಲ್ಲಿ ಪಂಪ್‌ವೆಲ್‌ನಿಂದ ಕೆಪಿಟಿ ಕಡೆಗೆ ಬಂದು, ಬೈಕ್‌ಗೆ ಢಿಕ್ಕಿಯಾಗಿದೆ. ಇದರಿಂದ ಬೈಕ್ ಸವಾರ ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ. ಕೂಡಲೇ ಸ್ಥಳೀಯರು ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಕಾರು ಮತ್ತು ಬೈಕ್‌ಗಳ ನಡುವಿನ ಅಪಘಾತದಿಂದಾಗಿ ಬೈಕ್ ಹೊತ್ತಿ ಉರಿದಿದ್ದು, ಬೈಕ್‌ನ ಸೀಟ್ ಹಾಗೂ ಮುಂಭಾಗ ಸುಟ್ಟು ಕರಕಲಾಗಿದೆ.
ಈ ಕುರಿತು ಕದ್ರಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story