ರಫೇಲ್ ಡೀಲ್: ಚರ್ಚೆಗೆ ನಾವು ಸಿದ್ಧ, ಸಮಯ ನಿಗದಿಗೊಳಿಸಿ
ಕೇಂದ್ರ ಸರಕಾರದ ಸವಾಲು ಸ್ವೀಕರಿಸಿದ ಕಾಂಗ್ರೆಸ್

ಹೊಸದಿಲ್ಲಿ, ಡಿ.31: ರಫೇಲ್ ಡೀಲ್ ವಿಚಾರಕ್ಕೆ ಸಂಬಂಧಿಸಿ ಚರ್ಚೆಗೆ ತಾನು ಸಿದ್ಧ ಎಂದು ಕಾಂಗ್ರೆಸ್ ಹೇಳಿದ್ದು, ಕೇಂದ್ರ ಸರಕಾರದ ಸವಾಲನ್ನು ಸ್ವೀಕರಿಸಿದೆ.
“ಜೇಟ್ಲಿ ಒಂದು ಸವಾಲೆಸೆದಿದ್ದಾರೆ. ನಾವು ಜನವರಿ 2ರಂದು ಚರ್ಚೆ ನಡೆಸಲು ಸಿದ್ಧರಿದ್ದೇವೆ. ದಯವಿಟ್ಟು ಸಮಯವನ್ನು ನಿರ್ಧರಿಸಿ” ಎಂದು ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಲೋಕಸಭೆಯಲ್ಲಿ ಚರ್ಚೆಯ ವೇಳೆ ಕಾಂಗ್ರೆಸ್ ರಫೇಲ್ ವಿಚಾರ ಪ್ರಸ್ತಾಪಿಸಿದಾಗ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ, ಕಾಂಗ್ರೆಸ್ ಈ ಬಗ್ಗೆ ಚರ್ಚೆಗೆ ಬರಲಿ. ಸರಕಾರ ಚರ್ಚೆಗೆ ಸಿದ್ಧವಿದೆ. ಒಂದೇ ಸುಳ್ಳನ್ನು ಪದೇ ಪದೇ ಹೇಳಿದರೆ ಅದು ಸತ್ಯವಾಗುವುದಿಲ್ಲ ಎಂದಿದ್ದರು. ಇದೀಗ ಸರಕಾರದ ಈ ಸವಾಲನ್ನು ಕಾಂಗ್ರೆಸ್ ಸ್ವೀಕರಿಸಿದೆ.
Next Story