ಎಸ್ಸೆಸ್ಸೆಫ್ ಉಳ್ಳಾಲ ಡಿವಿಷನ್: ಟೀಮ್ ಹಸನೈನ್ ನಿಂದ ಮದ್ಯ ವಿರುದ್ಧ ವಿದ್ಯಾರ್ಥಿ ರ್ಯಾಲಿ

ಮುಡಿಪು, ಡಿ. 31: ಹೊಸ ವರ್ಷಾಚರಣೆಯ ನೆಪದಲ್ಲಿ ದೇಶಾದ್ಯಂತ ಡಿಸೆಂಬರ್ 31 ರಂದು ಅತ್ಯಧಿಕ ಮದ್ಯ ಮಾರಾಟವಾಗುವುದು ಸಾಮಾನ್ಯ. ಆ ಹಿನ್ನೆಲೆಯಲ್ಲಿ ಮದ್ಯದಿಂದಾಗುವ ತೊಂದರೆಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ಸಮಿತಿಯು ರಾಜ್ಯದ ಎಲ್ಲಾ ಡಿವಿಷನ್ ಕೇಂದ್ರದ ಮುಖ್ಯ ಬೀದಿಗಳಲ್ಲಿ ಟೀಮ್ ಹಸನೈನ್ ಮದ್ಯ ವಿರುದ್ಧ ವಿದ್ಯಾರ್ಥಿ ರ್ಯಾಲಿ ಹಾಗೂ ಡಿವಿಷನ್ ನ ಪ್ರಮುಖ ಪಟ್ಟಣಗಳಲ್ಲಿ ಮದ್ಯದ ವಿರುದ್ಧ ಸಂದೇಶ ಭಾಷಣ ಮಾಡಲು ನಿರ್ದೇಶಿಸಿದ ಭಾಗವಾಗಿ ಎಸ್ಸೆಸ್ಸೆಫ್ ಉಳ್ಳಾಲ ಡಿವಿಷನ್ ನ ಎಸ್ಸೆಸ್ಸೆಫ್ ಟೀಮ್ ಹಸನೈನ್ ವಿದ್ಯಾರ್ಥಿ ರ್ಯಾಲಿ ಎಸ್ಸೆಸ್ಸೆಫ್ ಉಳ್ಳಾಲ ಡಿವಿಷನ್ ಅಧ್ಯಕ್ಷ ಮುನೀರ್ ಅಹ್ಮದ್ ಕಾಮಿಲ್ ಸಖಾಫಿ ಅಧ್ಯಕ್ಷತೆಯಲ್ಲಿ ಮುಡಿಪುವಿನಲ್ಲಿ ನಡೆಯಿತು.
ಸಂಬಾರ ತೋಟದಿಂದ ಮುಡಿಪು ಜಂಕ್ಷನ್ ತನಕ ಎಸ್ಸೆಸ್ಸೆಫ್ ಉಳ್ಳಾಲ ಡಿವಿಷನ್ ಟೀಮ್ ಹಸನೈನ್ ಸಕ್ರೀಯ ಕಾರ್ಯಕರ್ತರಿಂದ ರ್ಯಾಲಿ ನಡೆಯಿತು.
ಎಸ್ಸೆಸ್ಸೆಫ್ ಉಳ್ಳಾಲ ಡಿವಿಷನ್ ಟೀಮ್ ಹಸನೈನ್ ಗೈಡ್ ತೌಸೀಫ್ ಸ ಅದಿ ಹರೇಕಳ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಎಸ್ಸೆಸ್ಸೆಫ್ ರಾಜ್ಯ ಸಮಿತಿ ಸದಸ್ಯ ಇಸ್ಮಾಯಿಲ್ ಮಾಸ್ಟರ್ ಮೊಂಟೆಪದವು ಕಾರ್ಯಕ್ರಮದಲ್ಲಿ ಸಂದೇಶ ಭಾಷಣ ಮಾಡಿದರು. ಎಸ್ಸೆಸ್ಸೆಫ್ ಉಳ್ಳಾಲ ಡಿವಿಷನ್ ಅಧ್ಯಕ್ಷ ಮುನಿರ್ ಅಹ್ಮದ್ ಕಾಮಿಲ್ ಸಖಾಫಿ ಉಳ್ಳಾಲ ಕಾರ್ಯಕ್ರಮದಲ್ಲಿ ಮುಖ್ಯ ಪ್ರಭಾಷಣ ಮಾಡಿದರು.
ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಫ್ ದ.ಕ ಜಿಲ್ಲಾ ಸಮಿತಿ ಸದಸ್ಯರಾದ ಸಯ್ಯದ್ ಖುಬೈಬ್ ತಂಙಳ್,ಜಮಾಲುದ್ದೀನ್ ಸಖಾಫಿ ಮುದುಂಗಾರುಕಟ್ಟೆ, ಎಸ್ಸೆಸ್ಸೆಫ್ ಡಿವಿಷನ್ ಪ್ರಧಾನ ಕಾರ್ಯದರ್ಶಿ ಹಮೀದ್ ತಲಪಾಡಿ, ಕೋಶಾಧಿಕಾರಿ ಶರೀಫ್ ಮುಡಿಪು ,ಕ್ಯಾಂಪಸ್ ಕಾರ್ಯದರ್ಶಿ ಇಲ್ಯಾಸ್ ಪೊಟ್ಟೊಳಿಕೆ, ಖತೀಬರಾದ ಅಬ್ದುಲ್ ರಹ್ಮಾನ್ ಮದನಿ ಮಧ್ಯನಡ್ಕ,ಆಸಿಫ್ ಸಖಾಫಿ ಮುಡಿಪು,ಡಿವಿಷನ್ ಸದಸ್ಯರಾದ ನೌಫಲ್ ಪರೀದ್ ನಗರ,ಇಕ್ಬಾಲ್ ಮಧ್ಯನಡ್ಕ,ಸಿದ್ದೀಕ್ ಸಖಾಫಿ ಕಾಯಾರ್, ಅಝೀಝ್ ಎಚ್.ಕಲ್, ಜಾಫರ್ ಅಳೇಕಲ, ಮೊಯಿದಿನ್ ಮೋರ್ಲ, ಶರೀಫ್ ಸ ಅದಿ ಸಂಬಾರತೋಟ,ಸಿದ್ದೀಕ್ ಕೊಮರಂಗಳ ಮೊದಲಾದವರು ಉಪಸ್ಥಿತರಿದ್ದರು.
ಎಸ್ಸೆಸ್ಸೆಫ್ ಉಳ್ಳಾಲ ಡಿವಿಷನ್ ಪ್ರಧಾನ ಕಾರ್ಯದರ್ಶಿ ಹಮೀದ್ ತಲಪಾಡಿ ಸ್ವಾಗತಿಸಿದರು.ಕ್ಯಾಂಪಸ್ ಕಾರ್ಯದರ್ಶಿ ಇಲ್ಯಾಸ್ ಪೊಟ್ಟೊಳಿಕೆ ವಂದಿಸಿದರು.