ಮೈಸೂರು: ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ನೇತೃತ್ವದಲ್ಲಿ ಸಭೆ
ತಿ.ನರಸೀಪುರದಲ್ಲಿ ನಡೆಯುವ 11 ನೇ ಕುಂಭಮೇಳ

ಮೈಸೂರು, ಡಿ.31: ತಿ.ನರಸೀಪುರದ ತಿರುಮಕೂಡಲು ಸಂಗಮದಲ್ಲಿ ನಡೆಯಲಿರುವ 11ನೇ ಕುಂಭಮೇಳ ಕುರಿತು ಸುತ್ತೂರು ಶಾಖಾ ಮಠದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಅವರ ನೇತೃತ್ವದಲ್ಲಿ ಕುಂಭಮೇಳ ಪೂರ್ವಭಾವಿ ಸಭೆ ನಡೆಯಿತು.
ನಗರದ ಸುತ್ತೂರು ಮಠದ ಆವರಣದಲ್ಲಿ ಸೋಮವಾರ ಸಭೆ ನಡೆಸಿ ತಿ.ನರಸೀಪುರದ ತ್ರಿವೇಣಿ ಸಂಗಮದಲ್ಲಿ 11ನೇ ಕುಂಭಮೇಳ ಫೆ.17 ರಿಂದ19 ರವರೆಗೆ ನಡೆಯಲಿದ್ದು, ಕುಂಭಮೇಳದ ಸಿದ್ಧತೆಗಳ ಬಗ್ಗೆ ಚರ್ಚೆ ನಡೆಸಿದರು.
ಪೂರ್ವಭಾವಿ ಸಭೆಯಲ್ಲಿ ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಆದಿಚುಂಚನಗಿರಿ ನಿರ್ಮಾಲಾನಂದನಾಥ ಸ್ವಾಮೀಜಿ, ವಾಟಾಳು ಮಠದ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ಕೈಲಾಸಾನಾಂದಪುರಿ ಮಠ, ರಾಮಕೃಷ್ಣಾಶ್ರಮ, ಮಾತಾ ಅಮೃತಾನಂದಮಯೀ ಆಶ್ರಮ, ಕನಕ ಪೀಠ,ಸೇರಿದಂತೆ ವಿವಿಧ ಮಠಾಧೀಶರು ಪಾಲ್ಗೊಂಡಿದ್ದರು.
ತಿ.ನರಸೀಪುರ ಶಾಸಕ ಅಶ್ವಿನ್ ಕುಮಾರ್,ಜಿಲ್ಲಾಧಿಕಾರಿ ಅಭಿರಾಮ್ ಜಿ ಶಂಕರ್, ಸೇರಿದಂತೆ ಜನಪ್ರತಿನಿಧಿಗಳು ವಿವಿಧ ಇಲಾಖಾಧಿಕಾರಿಗಳು ಪಾಲ್ಗೊಂಡಿದ್ದರು. ಮಠಾಧೀಶರು ಕುಂಭಮೇಳ ಅಯೋಜನೆ ಬಗ್ಗೆ ಸಲಹೆ ನೀಡಿದರೆ, ಮೂಲ ಸೌಕರ್ಯ ಪೂಜಾ ಕೈಂಕರ್ಯ, ಹೋಮ ಹವನ, ಗಂಗಾ ಆರತಿ ಸೇರಿದಂತೆ ಧಾರ್ಮಿಕ ಕಾರ್ಯಕ್ರಮಗಳ ಕುರಿತು ಚರ್ಚೆ ನಡೆಸಲಾಯಿತು.





