ವ್ಯಾಟಿಕನ್ ವಕ್ತಾರ, ಸಹಾಯಕಿ ದಿಢೀರ್ ರಾಜೀನಾಮೆ
ವ್ಯಾಟಿಕನ್ ನಗರ,ಡಿ. 31: ಕ್ರೈಸ್ತರ ಪರಮೋಚ್ಛ ಧರ್ಮಪೀಠ ವ್ಯಾಟಿಕನ್‌ನ ವಕ್ತಾರ ಹಾಗೂ ಅವರ ಸಹಾಯಕಿ ಸೋಮವಾರ ದಿಢೀರನೆ ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದಾರೆಂದು ಎಂದು ಅಧಿಕೃತ ಪ್ರಕಟಣೆಯೊಂದು ತಿಳಿಸಿದೆ.
ವ್ಯಾಟಿಕನ್‌ನ ವಕ್ತಾರ, ಅಮೆರಿಕ ಸಂಜಾತರಾದ ಗ್ರೆಗ್ ಬುರ್ಕ್ ಮತ್ತು ಅವರ ಸಹಾಯಕಿ ಸ್ಪೇನ್ ಮೂಲದ ಪಲೋಮಾ ಗಾರ್ಸಿಯಾ ಓವರ್‌ಜೊ ಅವರ ರಾಜೀನಾಮೆಗೆ ಯಾವುದೇ ಕಾರಣವನ್ನು ಈತನಕ ಬಹಿರಂಗಪಡಿಸಲಾಗಿಲ್ಲ.
ಪೋಪ್ ಅವರು ಇಟಲಿಯ ಪತ್ರಕರ್ತ ಹಾಗೂ ತನ್ನ ವೈಯಕ್ತಿಕ ಸ್ನೇಹಿತರಾದ ಆ್ಯಂಡ್ರಿಯಾ ಟೊರ್ನಿಯೆಲಿ ಅವರನ್ನು ವ್ಯಾಟಿಕನ್‌ನ ಎಲ್ಲಾ ಸಂವಹನ ಸಂಸ್ಥೆಗಳ ಸಂಪಾದಕೀಯ ನಿರ್ದೇಶಕರಾಗಿ ನೇಮಕಗೊಳಿಸಿದ ಎರಡು ವಾರಗಳ ಬಳಿಕ ಇವರಿಬ್ಬರು ತಮ್ಮ ಹುದ್ದೆಯನ್ನು ತ್ಯಜಿಸಿದ್ದಾರೆ.
Next Story