ಮಾಡೂರು: ಖಾಝಿ ಸ್ವೀಕಾರ ಸಮಾರಂಭ, ಸನ್ಮಾನ ಕಾರ್ಯಕ್ರಮ

ಕೋಟೆಕಾರ್, ಜ. 1: ಮಾಡೂರು ಜಮಾಅತ್ ಕಮಿಟಿ ಮತ್ತು ಮಾಡೂರು ಯೂತ್ ಫೆಡರೇಶನ್ ಸಹಯೋಗದಲ್ಲಿ ಖಾಝಿ ಸ್ವೀಕಾರ ಕಾರ್ಯಕ್ರಮವು ಮಾಡೂರು ಮಸೀದಿ ಮುಂಭಾಗದಲ್ಲಿ ಸೋಮವಾರ ಮಗ್ರಿಬ್ ನಮಾಝ್ ಬಳಿಕ ನಡೆಯಿತು.
ಉಡುಪಿ, ಹಾಸನ, ಚಿಕ್ಕಮಗಳೂರು ಜಿಲ್ಲೆಯ ಸಂಯುಕ್ತ ಖಾಝಿ ಹಾಜಿ ಪಿ.ಎಂ. ಇಬ್ರಾಹಿಂ ಮುಸ್ಲಿಯಾರ್ ಬೇಕಲ್ ಅವರು ಮಾಡೂರು ಜಮಾಅತ್ ಗೆ ಖಾಝಿಯಾಗಿ ಸ್ವೀಕರಿಸಿದರು.
ಉಚ್ಚಿಲ ಮಸೀದಿಯ ಮುದರ್ರಿಸ್ ಇಬ್ರಾಹಿಂ ಪೈಝಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಹುಸೈನ್ ಸಹದಿ ಕೆ.ಸಿ.ರೋಡ್ ಈ ಸಂದರ್ಭ ಮಾತನಾಡಿದರು.
ವೇದಿಕೆಯಲ್ಲಿ ಎಸ್ ವೈ ಎಸ್ ಕರ್ನಾಟಕ ರಾಜ್ಯ ಕಾರ್ಯದರ್ಶಿ ಡಾ. ಎಂ.ಎಸ್.ಎಂ. ಅಬ್ದುಲ್ ರಶೀದ್ ಝೈನಿ ಕಾಮಿಲ್ ಸಖಾಫಿ ಅವರನ್ನು ಗೌರವಿಸಿ, ಸನ್ಮಾನಿಸಲಾಯಿತು.
ಮಾಡೂರು ಜುಮಾ ಮಸೀದಿಯ ಖತೀಬ್ ಬಶೀರ್ ಆಹ್ಸನಿ ತೋಡಾರ್ ಸ್ವಾಗತಿಸಿದರು, ಹಮೀದ್ ಹಸನ್ ಮಾಡೂರು ವಂದಿಸಿ, ಉಮರ್ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು.
ವೇದಿಕೆಯಲ್ಲಿ ಸದ್ರಿ ಇಮಾದುದ್ದೀನ್ ಜುಮಾ ಮಸೀದಿಯ ಅಧ್ಯಕ್ಷ ಮಜಿದ್ ಹಸನ್ ಮಾಡೂರು, ಜಂಟಿ ಕಮಿಟಿಗಳ ಸದಸ್ಯರಾದ ಅಬ್ದುಲ್ ಅಝೀಝ್, ಕೆ.ಅಬ್ಬಾಸ್, ಪಿ.ಎಚ್ ಅಬ್ಬಾಸ್, ಅನ್ವರ್ ಶೇಖ್, ಆಸಿಫ್ ಶೇಖ್, ಅಹ್ಮದ್ ಕೆ., ರಶೀದ್, ಹಂಝ ನವಾಝ್ ಮಾಡೂರು, ಬಶೀರ್ ಎಂ.ಎ., ರಫೀಕ್ ಮುಂಬೈ, ಮತ್ತಿತರರು ಉಪಸ್ಥಿತರಿದ್ದರು.