ಕಾಂಗ್ರೆಸ್ ನ ನೂತನ ರಾಷ್ಟ್ರೀಯ ವಕ್ತಾರರಾಗಿ ಡಾ. ನಾಸಿರ್ ಹುಸೈನ್ ಸೇರಿ 10 ಮಂದಿ ನೇಮಕ
ಡಾ.ಸೈಯದ್ ನಾಸಿರ್ ಹುಸೈನ್
ಹೊಸದಿಲ್ಲಿ, ಜ.1: ಕಾಂಗ್ರೆಸ್ ನ 10 ನೂತನ ರಾಷ್ಟ್ರೀಯ ವಕ್ತಾರರ ನೇಮಕಕ್ಕೆ ಅಧ್ಯಕ್ಷ ರಾಹುಲ್ ಗಾಂಧಿ ಒಪ್ಪಿಗೆ ಸೂಚಿಸಿದ್ದಾರೆ.
ನೂತನ ರಾಷ್ಟ್ರೀಯ ವಕ್ತಾರರಾಗಿ ರಾಜ್ಯಸಭಾ ಸದಸ್ಯ ಡಾ.ಸೈಯದ್ ನಾಸಿರ್ ಹುಸೈನ್, ಪವನ್ ಖೇರಾ, ಜೈವೀರ್ ಶೆರ್ಗಿಲ್, ರಾಗಿಣಿ ನಾಯಕ್, ಗೌರವ್ ವಲ್ಲಭ್ ಹಾಗು ರಾಜೀವ್ ತ್ಯಾಗಿ ಆಯ್ಕೆಯಾಗಿದ್ದಾರೆ. ಉತ್ತರ ಪ್ರದೇಶ ನಾಯಕ ಅಖಿಲೇಶ್ ಪ್ರತಾಪ್ ಸಿಂಗ್, ಸುನೀಲ್ ಅಹಿರೆ, ಹಿನಾ ಕವಾರೆ ಹಾಗು ಶ್ರವಣ್ ದಸೋಜು ಪಕ್ಷದ ನೂತನ ವಕ್ತಾರರಾಗಿ ನೇಮಿಸಲಾಗಿದೆ.
Next Story