ಕಾರ್ಕಳ : ಸುಲೈಮಾನ್ ಮುಸ್ಲಿಯಾರ್ ನಿಧನ

ಕಾರ್ಕಳ, ಜ. 1: ಹೊಸ್ಮಾರು ಶೈಖ್ ಮುಹಿಯದ್ದೀನ್ ಜುಮಾ ಮಸೀದಿಯ ಮಾಜಿ ಖತೀಬ್ ಸುಲೈಮಾನ್ ಮುಸ್ಲಿಯಾರ್ ಜ. 1ರಂದು ನಿಧನರಾದರು.
ಗುಂಪಕಲ್ಲು ಉಸ್ತಾದ್ ಎಂದೇ ಖ್ಯಾತರಾಗಿದ್ದ ಅವರು ಸ್ಥಳೀಯ ಧಾರ್ಮಿಕ ಕಾರ್ಯಕ್ರಮಗಳಿಗೆ ನೇತೃತ್ವ ನೀಡುತ್ತಿದ್ದು, ಸರ್ವ ಧರ್ಮಗಳ ಜನರಲ್ಲಿ ಉತ್ತಮ ಬಾಂಧವ್ಯ ಹೊಂದಿ ಜನಾನುರಾಗಿಯಾಗಿದ್ದರು.
ಅವರು ಪತ್ನಿ, ಈದು ಗ್ರಾಮ ಪಂಚಾಯತ್ ಸದಸ್ಯ, ಶೈಖ್ ಮುಹಿಯದ್ದೀನ್ ಜುಮ್ಮಾ ಮಸೀದಿ ಅಧ್ಯಕ್ಷ ಅಬೂಬಬಕರ್ ಸಿದ್ದೀಕ್ ಸೇರಿದಂತೆ ನಾಲ್ವರು ಪುತ್ರರು, ನಾಲ್ವರು ಪುತ್ರಿಯರು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.
ಮೃತರ ಆತ್ಮಕ್ಕೆ ಶಾಂತಿ ಕೋರಿ ಹೊಸ್ಮಾರು ಶೈಖ್ ಮುಹಿಯದ್ದೀನ್ ಜುಮಾ ಮಸೀದಿ ಆಡಳಿತ ಸಮಿತಿಯು ಸಂತಾಪ ಸೂಚಿಸಿದೆ.
Next Story