ಸಮಗ್ರ ದೃಷ್ಟಿಕೋನವುಳ್ಳ ಆಯುರ್ವೇದ ಶ್ರೇಷ್ಟ: ವಿನಾಯಕಾನಂದಜಿ

ಉಡುಪಿ, ಜ.1: ಪ್ರಕೃತಿಗೆ ಅನುಗುಣವಾದ ವಿಜ್ಞಾನ ಯಾವಾಗಲು ಹಿತ ವಾಗಿರುತ್ತದೆ. ಹಾಗಾಗಿ ಸಮಗ್ರ ದೃಷ್ಟಿಕೋನವುಳ್ಳ ಆಯುರ್ವೇದ ಸಮಗ್ರ ಶಾಸ್ತ್ರ ಗಳಲ್ಲಿ ಶ್ರೇಷ್ಟವಾಗಿದೆ ಎಂದು ಶ್ರೀ ರಾಮಕೃಷ್ಣ ಆಶ್ರಮ ಬೈಲೂರು ಮಠದ ಸ್ವಾಮಿ ವಿನಾಯಕಾನಂದಜಿ ಮಹಾರಾಜ್ ಹೇಳಿದ್ದಾರೆ.
ಕುತ್ಪಾಡಿ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಮಹಾವಿದ್ಯಾಲ ಯದ ಭಾವಪ್ರಕಾಶ ಸಭಾಂಗಣದಲ್ಲಿ ಇತ್ತೀಚೆಗೆ ಜರಗಿದ 20ನೇಯ ಶಿಷ್ಯೋ ಪನಯನ ಸಮಾರಂಭದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡು ತಿದ್ದರು.
ಪ್ರಾಂಶುಪಾಲ ಡಾ.ಜಿ.ಶ್ರೀನಿವಾಸ ಆಚಾರ್ಯ ಅಧ್ಯಕ್ಷತೆಯನ್ನು ವಹಿಸಿದ್ದರು. ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಮಮತಾ ಕೆ.ವಿ. ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ.ಸುಚೇತ ಕುಮಾರಿ ವಿದ್ಯಾರ್ಥಿಗಳಿಗೆ ದೀಕ್ಷಾ ಬೋಧನೆ ಮಾಡಿದರು. ಸ್ನಾತಕೋತ್ತರ ವಿಭಾಗದ ಸಹಾಯಕ ಮುಖ್ಯಸ್ಥ ಡಾ.ನಾಗರಾಜ ಎಸ್., ರಾಮಕೃಷ್ಣ ಆಶ್ರಮದ ಡಾ. ವಿನೋದ್ ಹೆಗ್ಡೆ ಉಪಸ್ಥಿತರಿದ್ದರು.
ಸ್ನಾತಕೋತ್ತರ ವಿಭಾಗದ ಮುಖ್ಯಸ್ಥ ಡಾ.ನಿರಂಜನ ರಾವ್ ಸ್ವಾಗತಿಸಿದರು. ಸಹಾಯಕ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ.ವೀರಕುಮಾರ ಕೆ. ವಂದಿಸಿ ದರು. ಸ್ವಸ್ಥವೃತ್ತ ವಿಭಾಗದ ಉಪನ್ಯಾಸಕ ಡಾ.ಸಂದೇಶ ಶೆಟ್ಟಿ ಹಾಗೂ ಶಲ್ಯತಂತ್ರ ವಿಭಾಗದ ಸಹಪ್ರಾಧ್ಯಾಪಕ ಡಾ.ರಾಕೇಶ್ ಆರ್.ಎನ್. ಕಾರ್ಯಕ್ರಮ ನಿರೂಪಿಸಿದರು.