ಜ.19: ಆಲಡ್ಕದಲ್ಲಿ ದಫ್ ಸ್ಪರ್ಧಾ ಕಾರ್ಯಕ್ರಮ
ಬಂಟ್ವಾಳ, ಜ. 1: ಇಸ್ಲಾಮಿನ ಸಾಂಸ್ಕೃತಿಕ ಕಲೆಯಾಗಿರುವ ದಫ್ ಕಲೆಯನ್ನು ಉಳಿಸಿ ಬೆಳೆಸಿ ಮುಂದಿನ ಪೀಳಿಗೆಗೆ ತಲುಪಿಸುವ ನಿಟ್ಟಿನಲ್ಲಿ ನಾಡಿನ ವಿವಿಧೆಡೆ ದಫ್ ಸ್ಪರ್ಧಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಜ. 5ರಂದು ಮಲಾರ್-ಪಾವೂರು, ಜ.12ರಂದು ಉಡುಪಿ ಜಿಲ್ಲೆಯ ಶಿರ್ವ-ಮಂಚಕಲ್, ಜ. 13ರಂದು ಶಿವಮೊಗ್ಗ ಜಿಲ್ಲೆಯ ಸಾಗರ ಹಾಗೂ ಮಂಗಳೂರು ತಾಲೂಕಿನ ಜೋಕಟ್ಟೆಯಲ್ಲಿ, ಜ.19ರಂದು ಪಾಣೆಮಂಗಳೂರಿನ ಆಲಡ್ಕದಲ್ಲಿ, ಫೆ. 2 ರಂದು ಪುತ್ತೂರು ತಾಲೂಕಿನ ಕಬಕದಲ್ಲಿ, ಫೆ. 5ರಂದು ಕಾಸರಗೋಡು ಜಿಲ್ಲೆಯ ಪೆರ್ಲದಲ್ಲಿ, ಫೆ. 9ರಂದು ಹಳೆಯಂಗಡಿ-ಕದಿಕೆಯಲ್ಲಿ, ಫೆ. 13ರಂದು ಉಪ್ಪಿನಂಗಡಿ ಸಮೀಪದ ಆತೂರಿನಲ್ಲಿ, ಫೆ. 16 ರಂದು ಉಡುಪಿ ಜಿಲ್ಲೆಯ ಕಂಪನ-ಬೈಲೂರಿನಲ್ಲಿ, ಫೆ. 17ರಂದು ಕಾಪು-ಮಜೂರಿನಲ್ಲಿ, ಫೆ. 23ರಂದು ಕಟಪಾಡಿ-ಮಣಿಪುರದಲ್ಲಿ ದಫ್ ಸ್ಪರ್ಧಾ ಕಾರ್ಯಕ್ರಮಗಳು ನಡೆಯಲಿದೆ ಎಂದು ದ.ಕ. ಮತ್ತು ಉಡುಪಿ ಜಿಲ್ಲಾ ದಫ್ ಅಸೋಸಿಯೇಶನ್ ಪ್ರಧಾನ ಕಾರ್ಯದರ್ಶಿ ಪಿ.ಎಂ. ಅಶ್ರಫ್ ಪಾಣೆಮಂಗಳೂರು ತಿಳಿಸಿದ್ದಾರೆ.
Next Story