ಡಿಸೆಂಬರ್ನಲ್ಲಿ ಕುಸಿತ ಕಂಡ ಜಿಎಸ್ಟಿ ಸಂಗ್ರಹ
ಹೊಸದಿಲ್ಲಿ,ಜ.1: 2018ರ ಕೊನೆಯ ತಿಂಗಳಾದ ಡಿಸೆಂಬರ್ನಲ್ಲಿ ಸರಕು ಮತ್ತು ಸೇವಾ ತೆರಿಗೆಯು 94,726 ಕೋಟಿ ರೂ.ಗೆ ಇಳಿದಿದೆ. ನವೆಂಬರ್ನಲ್ಲಿ 97,637 ಕೋಟಿ ರೂ. ಜಿಎಸ್ಟಿ ಸಂಗ್ರಹವಾಗಿತ್ತು ಎಂದು ವಿತ್ತ ಸಚಿವಾಲಯದ ಹೇಳಿಕೆ ತಿಳಿಸಿದೆ.
ಸಂಗ್ರಹವಾದ 94,726 ಕೋಟಿ ರೂ.ನಲ್ಲಿ 16,442 ಕೋಟಿ ರೂ. ಕೇಂದ್ರ ಜಿಎಸ್ಟಿಯಾಗಿದ್ದರೆ 22,459 ಕೋ.ರೂ. ರಾಜ್ಯ ಜಿಎಸ್ಟಿಯಾಗಿದೆ. 47,936 ಕೋ.ರೂ. ಸಂಯೋಜಿತ ಜಿಎಸ್ಟಿಯಾಗಿದೆ ಮತ್ತು 7,888 ಕೋ.ರೂ. ಸೆಸ್ ಆಗಿದೆ ಎಂದು ಸಚಿವಾಲಯ ತಿಳಿಸಿದೆ. ಎಪ್ರಿಲ್ನಲ್ಲಿ 1.03 ಲಕ್ಷ ಕೋಟಿ ರೂ. ಜಿಎಸ್ಟಿ ಸಂಗ್ರಹವಾಗಿದ್ದರೆ ಮೇನಲ್ಲಿ 94,016 ಕೋ.ರೂ., ಜೂನ್ನಲ್ಲಿ 95,610 ಕೋ.ರೂ, ಜುಲೈಯಲ್ಲಿ 96,483 ಕೋ.ರೂ., ಆಗಸ್ಟ್ನಲ್ಲಿ 93,960 ಕೋ.ರೂ., ಸೆಪ್ಟಂಬರ್ನಲ್ಲಿ 94,442 ಕೋ.ರೂ., ಅಕ್ಟೋಬರ್ನಲ್ಲಿ 1,00,710 ಕೋ.ರೂ ಮತ್ತು ನವೆಂಬರ್ನಲ್ಲಿ 97,637 ಕೋ.ರೂ. ಜಿಎಸ್ಟಿ ಸಂಗ್ರಹವಾಗಿದೆ ಎಂದು ಸಚಿವಾಲಯ ತಿಳಿಸಿದೆ.
Next Story