ಎಟಿಎಫ್ ದರ ಶೇ.14.7ರಷ್ಟು ಕಡಿತ

ಹೊಸದಿಲ್ಲಿ, ಜ.1: ವಿಮಾನಗಳಿಗೆ ಬಳಸುವ ಎಟಿಎಫ್ (ಏವಿಯೇಷನ್ ಟರ್ಬೈನ್ ಫ್ಯುಯೆಲ್)ನ ದರದಲ್ಲಿ ಶೇ.14.7ರಷ್ಟು ಪ್ರಮಾಣದ ದಾಖಲೆ ಇಳಿಕೆಯಾಗಿದ್ದು, ಇದೀಗ ಡೀಸೆಲ್ ಮತ್ತು ಪೆಟ್ರೋಲ್ಗಿಂತಲೂ ಅಗ್ಗವಾಗಿದೆ.
ಸಾವಿರ ಲೀಟರ್ ಎಟಿಎಫ್ ದರದಲ್ಲಿ 9,990 ರೂ. ಕಡಿತ ಮಾಡಲಾಗಿದ್ದು, ಇದೀಗ 58,060.97 ರೂ.ಗೆ ಇಳಿದಿದೆ. (ಒಂದು ಲೀಟರ್ಗೆ ಸುಮಾರು 58 ರೂ.). ಡಿಸೆಂಬರ್ 1ರಂದು ಎಟಿಎಫ್ ದರದಲ್ಲಿ ಶೇ.10.09ರಷ್ಟು ಕಡಿತಗೊಳಿಸಲಾಗಿತ್ತು ಎಂದು ಸರಕಾರಿ ಅಧೀನದ ತೈಲ ಸಂಸ್ಥೆಗಳ ಪ್ರಕಟಣೆ ತಿಳಿಸಿದೆ.
Next Story