ಫ್ರೀ ಡಿಶ್ ಮೂಲಕ ಕಾರ್ಯಕ್ರಮ ಹಂಚಿಕೆಗೆ ಒಪ್ಪಂದ ಮಾಡಿಕೊಳ್ಳಲು ದೂರದರ್ಶನ ಚಿಂತನೆ
ಹೊಸದಿಲ್ಲಿ, ಜ. 1: ಭಾರತದ ಏಕೈಕ ಉಚಿತ ‘ಡೈರೆಕ್ಟ್ ಟು ಹೋಮ್’ ಸ್ಯಾಟಲೈಟ್ ಟಿ.ವಿ. ಸೇವೆಯನ್ನು ‘ಉಚಿತ ಡಿಶ್’ ಮೂಲಕ ತನ್ನ ಕಾರ್ಯಕ್ರಮ ಹಂಚಿಕೊಳ್ಳಲು ಒಟಿಟಿ ಫ್ಲಾಟ್ ಫಾರ್ಮ್ಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲು ದೂರದರ್ಶನ (ಡಿಡಿ) ಚಿಂತಿಸುತ್ತಿದೆ.
23 ಸ್ಯಾಟಲೈಟ್ ಚಾನೆಲ್ಗಳನ್ನು ನಿರ್ವಹಿಸುತ್ತಿರುವ, ಡಿಟಿಎಚ್ ಸೇವೆ ಹೊರತುಪಡಿಸಿ ದೇಶದ ಶೇ. 92ರಷ್ಟು ಜನಸಂಖ್ಯೆಯನ್ನು ತಲುಪುತ್ತಿರುವ ದೂರದರ್ಶನಕ್ಕೆ ತಾನು ತಲುಪುವ ಜನಸಂಖ್ಯೆಯನ್ನು ಹೆಚ್ಚಿಸಲು ಒಟಿಟಿ ಫ್ಲಾಟ್ಫಾರ್ಮ್ ನೆರವಾಗಲಿದೆ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಒಟಿಟಿ ಫ್ಲಾಟ್ಫಾರ್ಮ್ ನೆಟ್ಫಿಕ್ಸ್, ಅಮೆಝಾನ್ ಪ್ರೈಮ್ ಹಾಗೂ ಬಿಗ್ಫ್ಲಿಕ್ಸ್ನಂತಹ ಕಾರ್ಯಕ್ರಮ ಪ್ರಸಾರ ಸೇವೆ ನೀಡುತ್ತ್ತಿದೆ. ವೀಕ್ಷಕರ ಸಂಖ್ಯೆಯನ್ನು ಹೆಚ್ಚಿಸಲು ಹಾಗೂ ಖಾಸಗಿ ವಾಹಿನಿಗಳ ಜೊತೆಗೆ ಸ್ಪರ್ಧಿಸಲು ತನ್ನ ಕಾರ್ಯಕ್ರಮವನ್ನು ಸುಧಾರಿಸಲು ಡಿಡಿ ಪ್ರಯತ್ನಿಸುತ್ತಿದೆ.
ಡಿಡಿ ಗ್ರಾಮೀಣ ಪ್ರದೇಶವನ್ನು ಅತಿ ಹೆಚ್ಚು ತಲುಪಿದರೆ, ಒಟಿಟಿ ಫ್ಲಾಟ್ಫಾರ್ಮ್ ನಗರ ಪ್ರದೇಶವನ್ನು ತಲುಪುತ್ತಿದೆ. ಒಪ್ಪಂದ ಎರಡಕ್ಕೂ ಉತ್ತಮ. ಇದರಿಂದ ನಮ್ಮ ವೀಕ್ಷಕರು ಸಮಕಾಲಿನ ಕಾರ್ಯಕ್ರಮವನ್ನು ವೀಕ್ಷಿಸುವ ಸೌಲಭ್ಯ ಪಡೆಯಲಿದ್ದಾರೆ.
ಅದೇ ರೀತಿ ಒಟಿಟಿ ಭವಿಷ್ಯದ ಮಾರುಕಟ್ಟೆ ಯಾಗಿರುವ ಗ್ರಾಮೀಣ ಪ್ರದೇಕ್ಕೂ ತಲುಪಲಿದೆ. ಒಟಿಟಿ ಫ್ಲಾಟ್ಫೋರ್ಮ್ ಶೇ. 16 ಟಿ.ವಿ. ವೀಕ್ಷಕರನ್ನು ತಲುಪುತ್ತಿದೆ ಎಂದು ಬೋಸ್ಟನ್ ಕನ್ಸಲ್ಟಿಂಗ್ ಗ್ರೂಪ್ (ಬಿಸಿಜಿ) ಹೇಳಿದೆ. ಒಟಿಟಿ ಫ್ಲಾಟ್ಫಾರ್ಮ್ ಆದಾಯ ಪ್ರಸ್ತುತ 3,500 ಕೋ. ರೂ. ಎಂದು ಅಂದಾಜಿಸಲಾಗಿದೆ. ಇದು ಮುಂದಿನ 5 ವರ್ಷಗಳಲ್ಲಿ 35,000 ಕೋ. ರೂ.ಗೆ ಬೆಳೆಯುವ ಸಾಧ್ಯತೆ ಇದೆ ಎಂದು ಬಿಸಿಜಿ ಹೇಳಿದೆ.