ಪ್ರವಾದಿ ನಿಂದನೆ: ಉಳ್ಳಾಲ ಬ್ಲಾಕ್ ಕಾಂಗ್ರೆಸ್‌ನಿಂದ ದೂರು

ಮಂಗಳೂರು, ಜ.1: ಪ್ರವಾದಿ ಅವರನ್ನು ನಿಂದಿಸಿದ ಸುದ್ದಿವಾಹಿನಿ ನಿರೂಪಕ ಅಜಿತ್ ಹನುಮಕ್ಕನವರ್ ವಿರುದ್ಧ ಉಳ್ಳಾಲ ಬ್ಲಾಕ್ ಕಾಂಗ್ರೆಸ್ ವತಿಯಿಂದ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ಅಸೈಗೋಳಿ ನೇತೃತ್ವದಲ್ಲಿ ಉಳ್ಳಾಲ ಪೋಲೀಸ್ ಠಾಣೆ ಮತ್ತು ಕೊಣಾಜೆ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಯಿತು.
ಈ ಸಂದರ್ಭ ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಸುರೇಶ್ ಭಟ್ನಗರ, ಮುಸ್ತಫ ಹರೇಕಳ, ಪ್ರಧಾನ ಕಾರ್ಯದರ್ಶಿ ರಹಿಮಾನ್ ಕೋಡಿಜಾಲ್, ಸಂಘಟನಾ ಕಾರ್ಯದರ್ಶಿಗಳಾದ ಸಲೀಂ ಮೆಗಾ, ಇಕ್ಬಾಲ್ ಸಾಮಾನಿಗೆ, ಪುರುಷೋತ್ತಮ ಅಂಚನ್, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಮಹಿಳಾ ಅಧ್ಯಕ್ಷೆ ದೇವಕಿ, ಕೋಟೆಕಾರ್ ಕಾಂಗ್ರೆಸ್ ಗ್ರಾಮ ಸಮಿತಿ ಅಧ್ಯಕ್ಷ ಉಮೇಶ್ ಗಾಂಬೀರ್, ಕೊಣಾಜೆ ಗ್ರಾಪಂ ಮಾಜಿ ಅಧ್ಯಕ್ಷ ಶೌಕತ್ ಕೊಣಾಜೆ ಮತ್ತು ಅಚ್ಚುತಗಟ್ಟಿ, ಕೊಣಾಜೆ ಗ್ರಾಮ ಸಮಿತಿ ಕಾಂಗ್ರೆಸ್ ಕಾರ್ಯದರ್ಶಿ ಇಕ್ಬಾಲ್ ಕೊಣಾಜೆ, ಸೋಮೇಶ್ವರ ಗ್ರಾಪಂ ಸದಸ್ಯ ಕಿಶೋರ್ ಗಟ್ಟಿ, ಉಳ್ಳಾಲ ಬ್ಲಾಕ್ ಮಹಿಳಾ ಕಾಂಗ್ರೆಸ್ ಸದಸ್ಯೆ ಸತ್ಯವತಿ, ಆಯಿಷಾ ಮೀನಾಝ್, ಉಳ್ಳಾಲ ನಗರ ಸಭೆ ಸದಸ್ಯ ಯು.ಎ.ಇಸ್ಮಾಯೀಲ್, ರವಿಚಂದ್ರಗಟ್ಟಿ, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಉಮ್ಮರ್ ಪಜೀರ್, ಹಮೀದ್ ಕೋಡಿ, ರಹಿಮಾನ್, ಜಮಾಲ್ ಅಜ್ಜಿನಡ್ಕ, ಮನ್ಸೂರ್, ಅಶ್ರಫ್ ಉಳ್ಳಾಲ್, ಯೂಸುಫ್ ಉಳ್ಳಾಲ್, ಅಬ್ದುಲ್ ಖಾದರ್, ರಫೀಕ್ ಸುಂದರಿ ಬಾಗ್, ಸಾಜಿದ್ ಉಳ್ಳಾಲ್, ರಹಿಮಾನ್ ಅದ್ದಾಮ ಮೊದಲಾದವರು ಉಪಸ್ಥಿತರಿದ್ದರು.