ಅಡ್ಕರೆಪಡ್ಪು: ಫಲಾಹ್ ಶಾಲೆಯಲ್ಲಿ ಗ್ರೀನ್‌ಫೆಸ್ಟ್
ಮಂಗಳೂರು, ಜ.1: ಜಮೀಯ್ಯತುಲ್ ಫಲಾಹ್ ಸಮೂಹ ಶಿಕ್ಷಣ ಸಂಸ್ಥೆಗಳಾದ ಗ್ರೀನ್ ವೀವ್ ಪ್ರಾಥಮಿಕ/ಪ್ರೌಢ ಹಾಗೂ ಪದವಿಪೂರ್ವ ಕಾಲೇಜಿನ ವಾರ್ಷಿಕ ದಿನಾಚರಣೆಯ ಪ್ರಯುಕ್ತ ‘ಗ್ರೀನ್‌ಫೆಸ್ಟ್-2018’ ನಡೆಯಿತು.
ಮಂಗಳೂರು ತಾಪಂ ಅಧ್ಯಕ್ಷ ಮುಹಮ್ಮದ್ ಮೋನು ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಮೀಯ್ಯತುಲ್ ಫಲಾಹ್ ದ.ಕ ಹಾಗೂ ಉಡುಪಿ ಜಿಲ್ಲಾಧ್ಯಕ್ಷ ಹಾಜಿ ಶಾಹುಲ್ ಹಮೀದ್ ಕೆ.ಕೆ. ಈ ವಿದ್ಯಾಸಂಸ್ಥೆಯು 31ನೇ ವರ್ಷಕ್ಕೆ ಕಾಲಿಡುತ್ತಿವೆ. ಈ ಸಂದರ್ಭ ಪೋಷಕರು, ಹಳೆ ವಿದ್ಯಾರ್ಥಿಗಳು ಸೇರಿಕೊಂಡು ಗ್ರೀನ್ ಫೆಸ್ಟ್-2018 ಆಚರಿಸುತ್ತಿರುವುದು ಶ್ಲಾಘನೀಯ ಎಂದರು.
ಸಂಸ್ಥೆಯ ಕೋಶಾಧಿಕಾರಿ ಹಾಜಿ ಇಬ್ರಾಹೀಂ ಕೋಡಿಜಾಲ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಗ್ರೀನ್ ವೀವ್ ಸಂಚಾಲಕ ಎಂ.ಎಚ್. ಮಲಾರ್ ಶುಭ ಹಾರೈಸಿದರು.
ಮುಖ್ಯ ಅತಿಥಿಯಾಗಿ ಬದ್ರುದ್ದೀನ್ ಪಣಂಬೂರ್ ಹಾಗೂ ಕಾಪು ಜಮೀಯ್ಯತುಲ್ ಫಲಾಹ್ ಅಧ್ಯಕ್ಷ ಶಬೀಹ್ ಅಹ್ಮದ್ ಖಾಝಿ ಸಂಸ್ಥೆಗೆ ಉಚಿತವಾಗಿ ಟೈಲರಿಂಗ್ ಮೆಶಿನ್‌ಗಳನ್ನು ಕೊಡುಗೆಯಾಗಿ ನೀಡಿದರು. ಫಲಾಹ್‌ನ ದ.ಕ. ಮತ್ತು ಉಡುಪಿ ಜಿಲ್ಲಾ ಉಪಾಧ್ಯಕ್ಷ ಅಬೂಮುಹಮ್ಮದ್ ಮತ್ತು ಪ್ರಧಾನ ಕಾರ್ಯದರ್ಶಿ ಸಲೀಂ ಹಂಡೇಲು, ಆಡಳಿತಾಧಿಕಾರಿ ಶಮೀರ್ ಕುದ್ರೋಳಿ ಉಪಸ್ಥಿತರಿದ್ದರು.
ವೇದಿಕೆಯಲ್ಲಿ ಶಾಲಾಡಳಿತ ಮಂಡಳಿಯ ಸದಸ್ಯರಾದ ಕೆಎಂಕೆ ಮಂಜನಾಡಿ, ಬಿ.ಎಂ. ತುಂಬೆ ಮತ್ತು ಮಾಜಿ ತಾಪಂ ಸದಸ್ಯ ಮುಸ್ತಫಾ ಪಾವೂರು, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ, ಕೊಣಾಜೆ ಗ್ರಾಪಂ ಸದಸ್ಯ ಅಬ್ದುಲ್ ಖಾದರ್, ಪ್ಲೇವಿ, ಗೋಪಿಕಾ, ತಾರಾ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಹಸೈನಾರ್ ಎ.ಬಿ., ಕಾಂಗ್ರೆಸ್ ಮುಖಂಡ ಮುಹಮ್ಮದ್ ಅಡ್ಕರೆಪಡ್ಪು,ಹಳೆವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಮುಹಮ್ಮದ್ ಮುಸ್ತಫಾ ಉಪಸ್ಥಿತರಿದ್ದರು.
ಪ್ರಾಂಶುಪಾಲ ಅಬುಬಕರ್ ಕೆ. ವಾರ್ಷಿಕ ವರದಿ ವಾಚಿಸಿದರು. ಉಪನ್ಯಾಸಕಿ ರಶ್ಮಿ ಮತ್ತು ದುಲೈಖಾ, ನಸ್ರೀಯಾ ಕಾರ್ಯಕ್ರಮ ನಿರೂಪಿಸಿದರು. ಎವ್‌ಲೀನ್ ಪಿ. ಐಮನ್ ವಂದಿಸಿದರು.