‘ಸಂಗಾತಿ ಜ್ವರ ಸಂಹಿತೆ’ ಪುಸ್ತಕ ಬಿಡುಗಡೆ
ಮಂಗಳೂರು, ಜ.1: ಡಾ.ಮುರಲೀ ಮೋಹನ್ ಚೂಂತಾರು ರಚಿಸಿದ 8ನೇ ಪುಸ್ತಕ ‘ಸಂಗಾತಿ ಜ್ವರ ಸಂಹಿತೆ’ ಬೆಂಗಳೂರಿನ ಅರಮನೆ ಮೈದಾನದಲ್ಲಿ ಇತ್ತೀಚೆಗೆ ನಡೆದ 2ನೇ ಹವ್ಯಕ ಸಮ್ಮೇಳನದಲ್ಲಿ ಬಿಡುಗಡೆಗೊಂಡಿತು.
ಇದೇ ವೇಳೆ ಈ ವೇದಿಕೆಯಲ್ಲಿ ಸುಮಾರು 75 ಮಂದಿ ಲೇಖಕರಿಗೆ ಸನ್ಮಾನ ಹಾಗೂ 100 ಪುಸ್ತಕಗಳು ಲೋಕಾರ್ಪಣೆಗೊಂಡಿತು. ‘ಸಂಗಾತಿ ಜ್ವರ ಸಂಹಿತೆ’ಯು ವಿಶಿಷ್ಟ ಪುಸ್ತಕವಾಗಿದ್ದು, ಸುಮಾರು 25 ಬಗೆಯ ಜ್ವರಗಳ ಬಗ್ಗೆ ಸರಳ ಭಾಷೆಯಲ್ಲಿ ವಿವರಣೆ ನೀಡಲಾಗಿದೆ. ಅಲ್ಲದೆ ಜ್ವರಗಳ ಲಕ್ಷಣಗಳು, ರೋಗ ತಡೆಗಟ್ಟುವ ಬಗ್ಗೆ ಮಾಹಿತಿ ನೀಡಲಾಗಿದೆ.
ಡಾ. ಮುರಲೀ ಮೋಹನ್ ಚೂಂತಾರು ಅವರು ಈಗಾಗಲೆ ರಕ್ತದಾನ ಜೀವದಾನ, ಕಚಗುಳಿ, ಸಂಜೀನಿ ಭಾಗ -1, ಸುರಕ್ಷಾ ದಂತ ಆರೋಗ್ಯ ಮಾರ್ಗದರ್ಶಿ, ಸಂಜೀನಿ ಆರೋಗ್ಯ ಮಾರ್ಗದರ್ಶಿ ಭಾಗ -2, ಚಿತ್ರಾನ್ನ, ಅರಿವು ಕೃತ್ತಿಗಳನ್ನು ರಚಿಸಿದ್ದಾರೆ.
Next Story