ಬೆಳ್ತಂಗಡಿ: ಪ್ರವಾದಿ ನಿಂದನೆ ವಿರುದ್ಧ ವಿವಿಧ ಸಂಘಟನೆಗಳಿಂದ ದೂರು

ಬೆಳ್ತಂಗಡಿ, ಜ. 1: ಸುವರ್ಣ ಸುದ್ದಿ ವಾಹಿನಿಯಲ್ಲಿ ಪ್ರವಾದಿ ಪೈಗಂಬರ್ ರನ್ನು ನಿಂದಿಸಿರುವ ನಿರೂಪಕ ಅಜಿತ್ ಹನುಮಕ್ಕನವರ್ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಮುಹ್ಯುದ್ದೀನ್ ಜುಮ್ಮಾ ಮಸ್ಜಿದ್ ಮುರ ನಾವೂರು ಇಲ್ಲಿನ ಜಮಾಅತ್ ಸಮಿತಿಯಿಂದ ಬೆಳ್ತಂಗಡಿ ಠಾಣೆಗೆ ದೂರು ನೀಡಲಾಯಿತು.
ಈ ವೇಳೆ ಜಮಾಅತ್ ಅಧ್ಯಕ್ಷ ಅಬೂಬಕ್ಕರ್ ಪಿ.ಎ, ಪ್ರ. ಕಾರ್ಯದರ್ಶಿ ಶಾಹುಲ್ ಹಮೀದ್ ಐಡಿಯಲ್, ಸದಸ್ಯರಾದ ಆಲಿಕುಂಞಿ ಸಖಾಫಿ, ಸ್ವಾದಿಕ್ ನಾವೂರು, ಜಾವಿದ್ ಮುರ, ನಾಸಿರ್, ಸುಲೈಮಾನ್, ಅಬುಸ್ವಾಲಿ, ಶರಫುದ್ದೀನ್ ಇವರು ಉಪಸ್ಥಿತರಿದ್ದರು.
ಎಸ್.ಕೆ.ಎಸ್.ಎಸ್.ಎಫ್ ಬೆಳ್ತಂಗಡಿ ವಲಯ
ಎಸ್.ಕೆ.ಎಸ್.ಎಸ್.ಎಫ್ ಬೆಳ್ತಂಗಡಿ ವಲಯದ ವತಿಯಿಂದ ಪ್ರವಾದಿಯವರನ್ನು ನಿಂದಿಸಿದ ಸುವರ್ಣ ನ್ಯೂಸ್ ನಿರೂಪಕರ ವಿರುದ್ದ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಈ ಸಂದರ್ಭದಲ್ಲಿ ಮುಖಂಡರುಗಳಾದ ಸಂಶುದ್ದೀನ್ ದಾರಿಮಿ,ಸಿರಾಜ್ ಚಿಲಿಂಬಿ, ಶರೀಫ್ ಕಕ್ಕಿಂಜೆ, ಶಮೀರ್ ಮುಸ್ಲಿಯಾರ್, ಸಾಧಿಕ್ ಕಟ್ಟೆ, ಹನೀಫ್ ಮಜಲ್, ಅಬ್ದುಲ್ಲ ಪೂಂಜಾಲಕಟ್ಟೆ, ಉಪಸ್ಥಿತರಿದ್ದರು.
ಎಸ್.ಕೆ.ಎಸ್.ಎಸ್.ಎಫ್ ಕಕ್ಕಿಂಜೆ ಕ್ಲಸ್ಟರ್
ಎಸ್.ಕೆ.ಎಸ್.ಎಸ್.ಎಫ್ ಕಕ್ಕಿಂಜೆ ಕ್ಲಸ್ಟರ್ ವತಿಯಿಂದ ಪ್ರವಾದಿಯವರನ್ನು ನಿಂದಿಸಿದ ಸುವರ್ಣ ನ್ಯೂಸ್ ನಿರೂಪಕರ ವಿರುದ್ದ ಧರ್ಮಸ್ಥಳ ಠಾಣೆಯಲ್ಲಿ ದೂರು ದಾಖಲಿಸಲಾಯಿತು.
ಈ ಸಂದರ್ಭದಲ್ಲಿ ಮುಖಂಡರುಗಳಾದ ಶರೀಫ್ ಕಕ್ಕಿಂಜೆ, ಶಕೀಲ್ ಅರೆಕ್ಕಲ್, ಶಮೀರ್ ಮುಸ್ಲಿಯಾರ್, ಜುಬೈರ್ ಬಂಡಸಾಲೆ, ರಫೀಕ್, ಸರ್ಧಾರ್ ಚಾಮಾಡಿ ಉಪಸ್ಥಿತರಿದ್ದರು.
ಬದ್ರಿಯಾ ಜುಮಾ ಮಸೀದಿ ಪೆರಾಡಿ
ಬದ್ರಿಯಾ ಜುಮಾ ಮಸೀದಿ ಪೆರಾಡಿ ವತಿಯಿಂದ ಪ್ರವಾದಿ ನಿಂದಕನ ವಿರುದ್ದ ವೇನೂರು ಠಾಣೆಯಲ್ಲಿ ಪ್ರಕರಣ ದಾಖಲಿಸಲಾಯಿತು. ಈ ಸಂದರ್ಭದಲ್ಲಿ ಮುಖಂಡರುಗಳಾದ ಹಾರಿಸ್ ಹನೀಫಿ, ಇರ್ಫಾನ್, ಖಲಂದರ್ ಸಾವ್ಯ, ಶರೀಫ್, ಹಮೀದ್ ಇದ್ದರು.