ಕರ್ಣಾಟಕ ಬ್ಯಾಂಕ್‌ನಿಂದ ಮೊಬೈಲ್ ಬ್ಯಾಂಕಿಂಗ್ ಆ್ಯಪ್ ಕೆಬಿಎಲ್ ಮೊಬೈಲ್ ಪ್ಲಸ್‌ಗೆ ಚಾಲನೆ

ಮಂಗಳೂರು, ಜ.1: ಕರ್ಣಾಟಕ ಬ್ಯಾಂಕ್ ತನ್ನ ಡಿಜಿಟಲ್ ಬ್ಯಾಂಕಿಂಗ್ ಅಭಿಯಾನದ ಭಾಗವಾಗಿ ಸಂಯೋಜಿತ ಮೊಬೈಲ್ ಬ್ಯಾಂಕಿಂಗ್ ಆ್ಯಪ್ ಕೆಬಿಎಲ್ ಮೊಬೈಲ್ ಪ್ಲಸ್‌ಗೆ ಚಾಲನೆ ನೀಡಿದೆ.
ಕೆಬಿಎಲ್ ಮೊಬೈಲ್ ಪ್ಲಸ್ ಆ್ಯಪ್ ಗೂಗಲ್ ಪ್ಲೇ ಸ್ಟೋರ್ ಮತ್ತು ಆ್ಯಪಲ್ ಆ್ಯಪ್ ಸ್ಟೋರ್‌ನಲ್ಲಿ ಲಭ್ಯವಿದೆ. ಈ ಆ್ಯಪ್ ಮೂಲಕ ಬ್ಯಾಂಕ್ ಗ್ರಾಹಕರು ಹಣ ವರ್ಗಾವಣೆ, ಬಿಲ್ ಪಾವತಿ, ಮೊಬೈಲ್, ಕೇಬಲ್ ರಿಚಾರ್ಜ್, ಖಾತೆ ವಿವರ ಪಡೆಯುವಿಕೆ, ಆನ್‌ಲೈನ್ ಎಫ್‌ಡಿ/ಆರ್‌ಡಿ ಖಾತೆ ತೆರೆಯುವುದು, ಪಿಎಂಜೆಡಿವೈ, ಪಿಎಂಜೆಜೆವೈ ಇತ್ಯಾದಿ ಯೋಜನೆಗಳಿಗೆ ಆನ್‌ಲೈನ್ ನೋಂದಣಿ ಹಾಗೂ ಇತರ ಸೌಲಭ್ಯಗಳನ್ನು ಪಡೆದುಕೊಳ್ಳಬಹುದಾಗಿದೆ.
ಈ ಆ್ಯಪ್‌ಅನ್ನು ಇತರ ಆ್ಯಪ್‌ಗಳಾದ ಭೀಮ್ ಕೆಬಿಎಲ್ ಯುಪಿಐ, ಕೆಬಿಎಲ್ ಎಂಪಾಸ್‌ಬುಕ್, ಕೆಬಿಎಲ್ ಲೊಕೇಟರ್ ಮತ್ತು ಎಂಕಾಮರ್ಸ್ ಜೊತೆ ಸಂಯೋಜಿಸಲಾಗಿದ್ದು ಗ್ರಾಹಕರು ಒಂದು ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುವ ಮೂಲಕ ಎಲ್ಲ ವಿಶೇಷತೆಗಳನ್ನು ಪಡೆದುಕೊಳ್ಳಬಹುದಾಗಿದೆ ಎಂದು ಬ್ಯಾಂಕ್‌ನ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕ ಮಹಾಬಲೇಶ್ವರ ಎಂ.ಎಸ್ ತಿಳಿಸಿದ್ದಾರೆ.