ಪ್ರವಾದಿ ನಿಂದನೆ ಮಾರಿಪ್ಪಳ್ಳದಲ್ಲಿ ಖಂಡನಾ ಸಭೆ

ಫರಂಗಿಪೇಟೆ ಜ. 1: ಪ್ರವಾದಿ ಪೈಗಂಬರ್ ರನ್ನು ನಿಂದನೆಗೈದ ಸುವರ್ಣ ಕನ್ನಡ ಟಿವಿ ಚಾನಲ್ ನಿರೂಪಕ ಅಜಿತ್ ಹನುಮಕ್ಕನವರ್ ವಿರುದ್ಧ ಬದ್ರಿಯ್ಯೀನ್ ಜುಮ್ಮಾ ಮಸೀದಿ ಮಾರಿಪ್ಪಳ್ಳ ಇದರ ಆಡಳಿತ ಸಮಿತಿ ನೇತೃತ್ವದಲ್ಲಿ ಹೈದ್ರೋಶಿಯಾ ಜುಮಾ ಮಸೀದಿ ಸುಜೀರ್ ಮಳ್ಳಿ, ಮೌಲಾ ಮಸ್ಜಿದ್ ಜಲಾಲಿಯಾ ನಗರ, ಖಿಲ್ರಿಯಾ ಜುಮ್ಮಾ ಮಸೀದಿ ಪೆರಿಮಾರ್ ಇದರ ಸಂಯುಕ್ತ ಆಶ್ರಯದಲ್ಲಿ ಮರಿಪ್ಪಳ್ಳದಲ್ಲಿ ಖಂಡನಾ ಸಭೆ ನಡೆಯಿತು.
ಮಾರಿಪ್ಪಳ್ಳ ಮಸೀದಿ ಖತೀಬ್ ಖಲೀಲುರ್ರಾಹ್ಮಾನ್ ದಾರಿಮಿ ಮುಖ್ಯ ಭಾಷಣ ಮಾಡಿ ಪ್ರವಾದಿಯನ್ನು ನಿಂದನೈಗೈದ ಸುವರ್ಣ ಚಾನೆಲ್ ನಿರೂಪಕನ ಹೇಳಿಕೆಯನ್ನು ಖಂಡಿಸಿದ ಅವರು ಪ್ರವಾದಿ ನಿಂದನೆ ಯಾರೇ ಮಾಡಿದರು ಸಹಿಸುವೂದಿಲ್ಲ. ಆದರೆ ಈ ದೇಶದ ಕಾನೂನನ್ನು ಗೌರವಿಸಿ ಪ್ರಜಾಸತ್ತಾತ್ಮಕ ರೀತಿಯಲ್ಲಿ ಪ್ರತಿಭಟನೆಯ ನಡೆಸಿ ಸುವರ್ಣ ಚಾನೆಲ್ ಮತ್ತು ಅದರ ನಿರೂಪಕನ ವಿರುದ್ಧ ಕಾನೂನು ರೀತಿಯ ಕ್ರಮ ಕೈಗೊಳ್ಳಬೇಕೆಂದು ನಾವು ಆಗ್ರಹಿಸುತ್ತಿದ್ದೇವೆ ಎಂದು ಹೇಳಿದರು.
ಮೌಲ ಮಸ್ಜಿದ್ ಜಲಾಲಿಯಾ ನಗರ ಮಾರಿಪ್ಪಲ್ಲ ಮುದರಿಸ್ ಶೈಕ್ ಮೊಹಮ್ಮದ್ ಇರ್ಫಾನಿ ಪೈಝಿ, ಪೇರಿಮಾರ್ ಮಸೀದಿ ಮುದರಿಸ ರಫೀಕ್ ಸ ಅದಿ ಅಳ್ ಅಫ್ಲಳಿ, ಪುದು ಗ್ರಾಪಂ ಅಧ್ಯಕ್ಷ ರಮ್ಲಾನ್ ಈ ಸಂದರ್ಭದಲ್ಲಿ ಮಾತನಾಡಿದರು.
ಬದ್ರೀಯ್ಯೀನ್ ಜುಮಾ ಮಸೀದಿ ಮಾರಿಪಲ್ಲ ಉಪಾಧ್ಯಕ್ಷ ಬಾವಾಕ, ಪುದು ಗ್ರಾಪಂ ಸದಸ್ಯ ಇಕ್ಬಾಲ್ ಸುಜೀರು, ಮುಸ್ಲಿಮ್ ಯುವ ವೇದಿಕೆ ಮಾರಿಪ್ಪಳ್ಳ ಅಧ್ಯಕ್ಷ ಎನ್.ಎಸ್. ನಿಸಾರ್ ಮಾರಿಪಲ್ಲ, ಕಾರ್ಯದರ್ಶಿ ಖಲೀಲ್ ಕೆ.ಎಸ್.ಮಾರಿಪಲ್ಲ, ರಫೀಕ್ ಪೆರಿಮಾರ್, ರಿಸ್ಕ್ಯೂ ಚಾರಿಟೇಬಲ್ ಟ್ರಸ್ಟ್ ಕಾರ್ಯದರ್ಶಿ ಹಕೀಂ ಸುಜೀರು, ಸೋಶಿಯಲ್ ಯೂತ್ ಫೌಂಡೇಶನ್ ಮಾರಿಪ್ಪಳ್ಳ ಅಧ್ಯಕ್ಷ ಫಯಾಝ್ ಮಾರಿಪಲ್ಲ, ಸಂಶುಲ್ ಉಲಮಾ ಕ್ರಿಯಾ ಸಮಿತಿ ಮಾರಿಪಲ್ಲ ಪಧಾದಿಕಾರಿಗಳು ಉಪಸ್ಥಿತರಿದ್ದರು. ಮಸೀದಿಯ ಪ್ರಧಾನ ಕಾರ್ಯದರ್ಶಿ ಅಬೂಬಕ್ಕರ್ ಸ್ವಾಗತಿಸಿ, ಅಶ್ರಫ್ ಮಳ್ಳಿ ಕಾರ್ಯಕ್ರಮ ನಿರೂಪಿಸಿದರು.
ನಂತರ ಫರಂಗಿಪೇಟೆ ಪೊಲೀಸ್ ಹೊರ ಠಾಣೆಗೆ ದೂರು ನೀಡಲಾಯಿತು.