ಕಣ್ಣೂರು ಆಂಗ್ಲ ಮಾಧ್ಯಮ ಶಿಕ್ಷಣ ಸಂಸ್ಥೆಗಳ ವಾರ್ಷಿಕೋತ್ಸವ

ಮಂಗಳೂರು, ಜ.1: ಕಣ್ಣೂರು ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢ ಶಾಲೆ ಹಾಗೂ ಪದವಿಪೂರ್ವ ಕಾಲೇಜುಗಳ ವಾರ್ಷಿಕೋತ್ಸವ ಕಾರ್ಯಕ್ರಮವು ಇತ್ತೀಚಿಗೆ ನಡೆಯಿತು.
ನಂಡೆ ಪೆಂಙಳ್ ಅಭಿಯಾನದ ಅಧ್ಯಕ್ಷ ನೌಷಾದ್ ಹಾಜಿ ಸೂರಲ್ಪಾಡಿ ಸಸಿಗೆ ನೀರೆರೆಯುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ, 23 ವರ್ಷಗಳ ಹಿಂದೆ ನೆಟ್ಟ ಕಣ್ಣೂರು ಆಂಗ್ಲ ಮಾಧ್ಯಮ ಶಿಕ್ಷಣ ಸಂಸ್ಥೆ ಇಂದು ಹೆಮ್ಮರವಾಗಿ ಬೆಳೆದು ನಿಂತು ಸಾವಿರಾರು ಮಕ್ಕಳಿಗೆ ಫಸಲನ್ನು ನೀಡುತ್ತಿದೆ. ಈ ಶಿಕ್ಷಣ ಸಂಸ್ಥೆ ಸ್ಥಾಪಿಸಿ ಬೆಳೆಸುವಲ್ಲಿ ಅನೇಕರ ಪಾತ್ರವಿದೆ. ಅವರೆಲ್ಲರೂ ಅಭಿನಂದನಾರ್ಹರು ಎಂದು ಹೇಳಿದರು.
ಮುಖ್ಯಅತಿಥಿಗಳಾಗಿದ್ದ ವಿಶ್ವಾಸ್ ಎಸ್ಟೇಟ್ಸ್‌ನ ಪಾಲುದಾರ ಸುಲೈಮಾನ್ ಶೇಖ್ ಬೆಳುವಾಯಿ, ಟ್ಯಾಲೆಂಟ್ ಸಲಹೆಗಾರ ರಫೀಕ್ ಮಾಸ್ಟರ್ ಶುಭ ಹಾರೈಸಿದರು.
ಕಣ್ಣೂರು ಎಜುಕೇಶನಲ್ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ಹಾಜಿ ಅಬ್ದುಲ್ ಖಾದರ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಶಾಲಾ ಆಡಳಿತ ಮಂಡಳಿಯ ಉಪಾಧ್ಯಕ್ಷ ಅಬ್ದುಲ್ ರಹಿಮಾನ್ ಹಾಜಿ ನಸೀಮಾ, ಪ್ರಧಾನ ಕಾರ್ಯದರ್ಶಿ ಬಿ.ಉಮರಬ್ಬ ಉಪಸ್ಥಿತರಿದ್ದರು.
ಸಂಸ್ಥೆಯ ಸಂಚಾಲಕ ರಿಯಾಝ್ ಅಹ್ಮದ್ ಸ್ವಾಗತಿಸಿದರು. ಕಾರ್ಯದರ್ಶಿ ಅಬ್ದುಲ್ ಮಜೀದ್ ಹಾಜಿ ಸಿತಾರ್ ಪ್ರಸ್ತಾವನೆಗೈದರು. ಶಾಲಾ ಪ್ರಾಂಶುಪಾಲೆ ವೀಣಾ ಗಂಗೊಳ್ಳಿ ವರದಿ ವಾಚಿಸಿದರು. ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಅರೆಬಿಕ್ ಶಿಕ್ಷಕಿ ಮಿಶ್ರಿಯ ವಂದಿಸಿದರು. ಶಿಕ್ಷಕಿ ಶ್ರುತಿ ಕಾರ್ಯಕ್ರಮ ನಿರೂಪಿಸಿದರು.
ಪ್ರಶಸ್ತಿ ವಿತರಣೆ
ಎಸೆಸೆಲ್ಸಿಯಲ್ಲಿ ನಾಫಿಯಾ ಮತ್ತು ಪಿಯುಸಿಯಲ್ಲಿ ಅಫ್ರೀನಾ ಅತ್ಯುತ್ತಮ ನಿರ್ಗಮನ ವಿದ್ಯಾರ್ಥಿ ಪ್ರಶಸ್ತಿಗಳನ್ನು ಪಡೆದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ನೀಡುವ ಪಟ್ಟಿಯನ್ನು ಶಂಶಿದಾ ವಾಚಿಸಿದರು. ಕೊನೆಯಲ್ಲಿ ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕತಿಕ ಕಾರ್ಯಕ್ರಮಗಳು ಪ್ರದರ್ಶನಗೊಂಡವು. ವಿದ್ಯಾರ್ಥಿನಿಯರಾದ ನಾಫಿಯಾ ಮತ್ತು ಅದಬಿಯಾ ಸಾಂಸ್ಕೃತಿಕ ಕಾರ್ಯಕ್ರಮ ನಿರೂಪಿಸಿದರು.