*ಪ್ರವಾದಿಯ ಅವಹೇಳನ: ಕೆ.ಸಿ.ರೋಡ್‌ನಲ್ಲಿ ಎಸೆಸ್ಸೆಫ್-ಎಸ್‌ವೈಎಸ್ ಪ್ರತಿಭಟನೆ

ಮಂಗಳೂರು, ಜ.2: ಪ್ರವಾದಿ ಮುಹಮ್ಮದ್ (ಸ.) ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ಖಾಸಗಿ ಚಾನೆಲ್ ನಿರೂಪಕ ಕೃತ್ಯವನ್ನು ಖಂಡಿಸಿ ಎಸ್‌ವೈಎಸ್ ಕೆ.ಸಿ.ರೋಡ್ ಸೆಂಟರ್, ಎಸೆಸ್ಸೆಫ್ ತಲಪಾಡಿ ಹಾಗೂ ಎಸೆಸ್ಸೆಫ್ ಕೋಟೆಕಾರ್ ಸೆಕ್ಟರ್ ವತಿಯಿಂದ ಮಂಗಳವಾರ ಕೆ.ಸಿ.ರೋಡ್ ಜಂಕ್ಷನ್‌ನಲ್ಲಿ ಪ್ರತಿಭಟನೆ ನಡೆಯಿತು.
ಅಲ್ ಮುಬಾರಕ್ ಜುಮಾ ಮಸೀದಿಯ ಖತೀಬ್ ಮುನೀರ್ ಸಖಾಫಿ ದುಆಗೈದರು. ಯಾಸೀನ್ ಸಖಾಫಿ ಪ್ರತಿಭಟನೆಯನ್ನು ಉದ್ಘಾಟಿಸಿದರು. ಎಸೆಸ್ಸೆಫ್ ಉಳ್ಳಾಲ ಡಿವಿಜನ್ ಅಧ್ಯಕ್ಷ ಮುನೀರ್ ಸಖಾಫಿ ಮುಖ್ಯಭಾಷಣಗೈದರು. ಸಲಾಂ ಉಚ್ಚಿಲ್ ಪ್ರಾಸ್ತಾವಿಕವಾಗಿ ಮಾತುಗಳನ್ನಾಡಿದರು.
ಪ್ರತಿಭಟನೆಯಲ್ಲಿ ಎಸ್‌ವೈಎಸ್ ಕೆ.ಸಿ.ರೋಡ್ ಸೆಂಟರ್ ಅಧ್ಯಕ್ಷ ಉಮರ್ ಮಾಸ್ಟರ್, ಪ್ರಧಾನ ಕಾರ್ಯದರ್ಶಿ ಫಾರೂಕ್ ಬಟ್ಟಪ್ಪಾಡಿ, ಕೋಶಾಧಿಕಾರಿ ಉಸ್ಮಾನ್ ಪಲ್ಲ, ಎಸ್ಸೆಸ್ಸೆಫ್ ಕೋಟೆಕಾರ್ ಸೆಕ್ಟರ್ ಅಧ್ಯಕ್ಷ ಸಿದ್ದೀಕ್ ಕೊಮರಂಗಳ, ಎಸ್ಸೆಸ್ಸೆಫ್ ತಲಪಾಡಿ ಸೆಕ್ಟರ್ ಅಧ್ಯಕ್ಷ ಸಿರಾಜುದ್ದೀನ್ ಎ.ಎಚ್., ಎಸ್ಸೆಸ್ಸೆಫ್ ಉಳ್ಳಾಲ ಡಿವಿಜನ್ ಪ್ರಧಾನ ಕಾರ್ಯದರ್ಶಿ ಹಮೀದ್ ತಲಪಾಡಿ, ಎಸ್‌ಜೆಎಂ ದ.ಕ. ಜಿಲ್ಲಾಧ್ಯಕ್ಷ ಪಿ.ಎಂ. ಮುಹಮ್ಮದ್ ಮದನಿ, ಅಬ್ದುಲ್ಲಾ ಮದನಿ, ಅಝೀಝ್ ಸಅದಿ ಅಫ್ಲಳಿ, ಸಿಟಿಎಂ ಸಲಾಂ ತಂಙಳ್, ಅಬ್ಬಾಸ್ ಕೊಳಂಗರೆ, ಅಬ್ಬಾಸ್ ಹಾಜಿ ಕೊಮರಂಗಳ, ಬಿ.ಎಚ್. ಇಸ್ಮಾಯಿಲ್, ಯುಬಿಎಂ ಮುಹಮ್ಮದ್ ಹಾಜಿ, ಇಸ್ಮಾಯಿಲ್ ಹಾಜಿ ಪೆರಿಬೈಲ್, ಅಬ್ಬಾಸ್ ಹಾಜಿ ಕೊಪ್ಪಳ, ಮೊಯ್ದೀನ್ ಬಾವ ಕೊಮರಂಗಳ, ಹಸೈನಾರ್, ಖಾದರ್ ಮಕ್ಯಾರ್, ಸೋಶಿಯಲ್ ಫಾರೂಕ್, ಸಲಾಂ ಕೆ.ಸಿ.ರೋಡ್ ಮತ್ತಿತರರು ಪಾಲ್ಗೊಂಡಿದ್ದರು.