ಉಡುಪಿ: ಸುವರ್ಣ ಗೋಪುರಕ್ಕಾಗಿ ವಿಶೇಷ ಕೌಂಟರ್

ಉಡುಪಿ, ಜ. 2: ಪರ್ಯಾಯ ಪಲಿಮಾರು ಮಠದ ಶ್ರೀವಿದ್ಯಾಧೀಶ ತೀರ್ಥರ ಮಹತ್ವಾಕಾಂಕ್ಷಿ ಯೋಜನೆಯಾದ ಶ್ರೀಕೃಷ್ಣ ಮಠಕ್ಕೆ ಸುವರ್ಣ ಗೋಪುರದ ಯೋಜನೆಗಾಗಿ ಜನಸಾಮಾನ್ಯರಿಂದ ದೇಣಿಗೆಯನ್ನು ಸಂಗ್ರಹಿಸಲು ಭೀಮ ಜ್ಯುವೆಲ್ಲರ್ಸ್ ಸಹಯೋಗದೊಂದಿಗೆ ವಿಶೇಷ ಕೌಂಟರ್‌ಗಳನ್ನು ತೆರೆಯಲಾಗಿದ್ದು, ಶ್ರೀಮಠದ ಬಡಗುಮಳಿಗೆಯಲ್ಲಿ ತೆರೆಯಲಾದ ದೇಣಿಗೆ ಕೌಂಟರ್‌ನ್ನು ಪಲಿಮಾರುಶ್ರೀಗಳು ಬುಧವಾರ ಉದ್ಘಾಟಿಸಿದರು.
ಸುವರ್ಣ ಗೋಪುರ ಯೋಜನೆಗೆ ಯಾರು ಬೇಕಿದ್ದರೂ ದೇಣಿಗೆಯನ್ನು ಈ ಕೌಂಟರ್‌ನಲ್ಲಿ ನೀಡಬಹುದಾಗಿದೆ. ಮಾಸಿಕ ಕಂತುಗಳಲ್ಲಿ 250 ರೂ., 500ರೂ. ಅಥವಾ 1000 ರೂ.ಗಳನ್ನು ಒಂದು ವರ್ಷದ ಅವಧಿಗೆ ಈ ಕೌಂಟರ್‌ಗಳಲ್ಲಿ ಸಂಗ್ರಹಿಸಲಾಗುತ್ತದೆ ಎಂದು ಸ್ವಾಮೀಜಿ ತಿಳಿಸಿದರು.
ದೇಣಿಗೆಯನ್ನು ನಗದು, ಚೆಕ್ ಹಾಗೂ ನೆಫ್ಟ್ ರೂಪದಲ್ಲಿ ನೀಡಬಹುದಾಗಿದೆ. ಭೀಮಾ ಜ್ಯುವೆಲ್ಲರ್ಸ್‌ನ ಉಡುಪಿ ಸೇರಿದಂತೆ ಕರ್ನಾಟಕದ 11 ಶಾಖೆಗಳನ್ನೂ ಇವುಗಳನ್ನು ಶ್ರೀರಾಮಾನಂಜನೇಯ ಪ್ರತಿಷ್ಠಾನ ಟ್ರಸ್ಟ್ ಸಂಗ್ರಹಿಸಿ ರಶೀದಿಯನ್ನು ಪಡೆಯಲು ಅವಕಾಶವಿದೆ ಎಂದವರು ತಿಳಿಸಿದರು.
ಈ ಸಂದರ್ಭದಲ್ಲಿ ಭೀಮ ಜ್ಯುವೆಲ್ಲರ್ಸ್‌ನ ಉಡುಪಿ ಶಾಖೆ ಪ್ರಬಂಧಕ ಅಶ್ವಜಿತ್ ರಾವ್, ರಾಘವೇಂದ್ರ ಭಟ್, ಪರ್ಯಾಯ ಮಠದ ಪಿಆರ್‌ಒ ಶ್ರೀಶ ಭಟ್, ವೆಂಕಟರಮಣ ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು.