ಕಾರ್ಕಳ: ಮಹಿಳೆಯ ಪಾತ್ರಿನಿಧ್ಯ ಕುರಿತ ವಿಚಾರ ಸಂಕಿರಣ

ಕಾರ್ಕಳ, ಜ.2: ಸಮತಾ ಸೈನಿಕ ದಳ ನಾಲ್ಕೂರು ಗ್ರಾಮಶಾಖೆ ವತಿಯಿಂದ ಪುರುಷ ಪ್ರಧಾನ ಕ್ಷೇತ್ರದಲ್ಲಿ ಮಹಿಳೆಯ ಪಾತ್ರಿನಿಧ್ಯ ಕುರಿತ ವಿಚಾರ ಸಂಕಿರಣ ವನ್ನು ಇತ್ತೀಚೆಗೆ ಮಿಯ್ಯಾರು ಸಭಾಭವನದಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಸಮತಾ ಸೈನಿಕ ದಳದ ಜಿಲ್ಲಾಧ್ಯಕ್ಷ ವಿಶ್ವ ನಾಥ ಪೇತ್ರಿ ಮಾತನಾಡಿ, ಸಮಾಜ ಶೈಕ್ಷಣಿಕವಾಗಿ ಮುಂದುವರೆದರೂ ಕೂಡ ಮೌಢ್ಯತೆ ಇನ್ನೂ ಕೂಡ ಜೀವಂತವಾಗಿದೆ. ಶಬರಿಮಲೆ ಅಯ್ಯಪ್ಪ ಸ್ವಾಮಿ ಹೆಸರಿನಲ್ಲಿ ಮಹಿಳೆಯನ್ನು ಅಸ್ಪಶ್ಯರನ್ನಾಗಿ ಮಾಡಲಾಗುತ್ತಿದೆ ಎಂದು ಆರೋಪಿ ಸಿದರು.
ಕೋಮುವಾದಿ ಬ್ರಾಹ್ಮಣಶಾಹಿಗಳು ಮಹಿಳೆಯ ಮುಟ್ಟು ಕೀಳು ಅಪವಿತ್ರ ಎಂದು ಅವಹೇಳನ ಮಾಡುತ್ತಿದೆ. ಇದು ಅವೈಜ್ಞಾನಿಕ ಮತ್ತು ಅಧರ್ಮ. ಮುಟ್ಟಿನಿಂದಲೇ ನಮ್ಮ ಹುಟ್ಟು ಎಂಬ ಈ ವೈಜ್ಞಾನಿಕ ಸತ್ಯವನ್ನು ಕೋಮುವಾದಿ ಬ್ರಾಹ್ಮಣ್ಯಶಾಹಿಗಳು ಅರಿತುಕೊಳ್ಳಬೇಕು. ಮುಗ್ದ ಜನರಲ್ಲಿ ವಿಷ ಬೀಜ ಬಿತ್ತುವುದರ ಮೂಲಕ ಮಹಿಳೆಯರನ್ನು ಕೀಳಾಗಿ ನೋಡುವುದನ್ನು ಬಿಡಬೇಕು ಎಂದರು.
ಅಧ್ಯಕ್ಷತೆಯನ್ನು ಗ್ರಾಮಶಾಖೆ ಅಧ್ಯಕ್ಷ ಗೋಪಾಲ ಮಿಯ್ಯಾರು ವಹಿಸಿದ್ದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್ ನಡೂರು, ಜಿಲ್ಲಾ ಸಹಕಾರ್ಯ ದರ್ಶಿ ಸುಧಾಕರ ನೊರ್ಗೋಳ್ಳಿ, ಜಿಲ್ಲಾ ಮಹಿಳಾ ಕಾರ್ಯದಶಿರ್ ಪಾರ್ವತಿ, ವಾರಿಜ್ ಉಪಸ್ಥಿತರಿದ್ದರು.