ಬೈಕ್, ಸರಗಳ್ಳತನ ಆರೋಪ: ಇಬ್ಬರ ಬಂಧನ

ಬೆಂಗಳೂರು, ಜ.2: ಬೈಕ್‌ಗಳನ್ನು ಕಳವು ಮಾಡಿಕೊಂಡು, ಸರಗಳ್ಳತನ ಮಾಡುತ್ತಿದ್ದ ಆರೋಪದಡಿ ಇಬ್ಬರನ್ನು ಬಂಧಿಸುವಲ್ಲಿ ನಗರದ ಉತ್ತರ ವಿಭಾಗದ ಪೊಲೀಸರು ಯಶಸ್ವಿಯಾಗಿದ್ದಾರೆ.
ಆಂಧ್ರಪ್ರದೇಶ ಮೂಲದ ಅಬ್ದುಲ್ ವಾಜೀದ್(21), ಅಬ್ರಾರ್(21) ಬಂಧಿತ ಆರೋಪಿಗಳೆಂದು ಪೊಲೀಸರು ತಿಳಿಸಿದ್ದಾರೆ.
ಮತ್ತಿಕೆರೆಯ ಈಶ್ವರ ದೇವಸ್ಥಾನದ ಕಡೆಯಿಂದ ದುಷ್ಕರ್ಮಿಗಳಿಬ್ಬರು, ಬೈಕ್‌ನಲ್ಲಿ ಬಂದು, ಗೀತಾ ಎಂಬಾಕೆಯ ಕೊರಳಿಗೆ ಕೈ ಹಾಕಿ ಚಿನ್ನದ ಮಾಂಗಲ್ಯ ಸರವನ್ನು ಕಸಿದುಕೊಂಡು ಹೋಗಿದ್ದಾರೆಂದು ಇಲ್ಲಿನ ಯಶವಂತಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ದೂರಿನನ್ವಯ ತನಿಖೆ ನಡೆಸಿದ ಪೊಲೀಸರು, ಇಬ್ಬರನ್ನು ಬಂಧಿಸಿ ಸುಮಾರು 25 ಲಕ್ಷ ರೂ. ಬೆಲೆ ಬಾಳುವ 20 ಬೈಕ್‌ಗಳನ್ನು ಜಪ್ತಿ ಮಾಡಿದ್ದಾರೆ. ಇವರ ಬಂಧನದಿಂದ ಯಶವಂತಪುರ ಪೊಲೀಸ್ ಠಾಣೆಯ ಒಂದು ಸರಗಳ್ಳತನ ಮತ್ತು 16 ಬೈಕ್ ಕಳವು ಸೇರಿದಂತೆ ಒಟ್ಟು 20 ಪ್ರಕರಣಗಳು ಪತ್ತೆಯಾಗಿವೆ ಎಂದು ಎಸಿಪಿ ರವಿ ಪ್ರಸಾದ್ ತಿಳಿಸಿದ್ದಾರೆ.
Next Story





