ಉಳ್ಳಾಲ ಮಾಸ್ಟರ್ ಕ್ರಿಕೆಟ್ ಲೀಗ್ : ಆಲ್ಫಾ ಸ್ಪೋರ್ಟ್ಸ್ ಕ್ಲಬ್ ಚಾಂಪಿಯನ್

ಮಂಗಳೂರು, ಜ.2: ಉಳ್ಳಾಲ ಕ್ರಿಕೆಟ್ ಬೋರ್ಡ್ ಆಯೋಜಿಸಿದ 8 ತಂಡದ ಮಾಸ್ಟರ್ ಕ್ರಿಕೆಟ್ ಲೀಗ್‌ನ ಸಮಾರೋಪ ಸಮಾರಂಭ ಉಳ್ಳಾಲ ಸೀ ಮೈದಾನದಲ್ಲಿ ರವಿವಾರ ಜರುಗಿತು.
ಆಲ್ಫಾ ಸ್ಪೋರ್ಟ್ಸ್ ಕ್ಲಬ್ ಪ್ರಥಮ ಮತ್ತು ಕೋಟೆಪುರ-ಕೋಡಿ ಫ್ರೆಂಡ್ಸ್ ಸರ್ಕಲ್ ದ್ವಿತೀಯ ಸ್ಥಾನ ಪಡೆಯಿತು. ಉಳ್ಳಾಲ ನಗರಸಭಾ ಸದಸ್ಯರಾದ ಮುಹಮ್ಮದ್ ಮುಕ್ಕಚ್ಚೇರಿ, ಯು.ಎ.ಇಸ್ಮಾಯಿಲ್, ಅಬ್ದುಲ್ ಜಬ್ಬಾರ್, ಅಬ್ದುಲ್ ಅಝೀಝ್, ಮಾಜಿ ಸದಸ್ಯ ಅಶ್ರಫ್ ಬಾವ, ಉಳ್ಳಾಲ ಕ್ರಿಕೆಟ್ ಬೋರ್ಡ್ ಅಧ್ಯಕ್ಷ ಖಲೀಲ್ ಉಳ್ಳಾಲ್, ಉಪಾಧ್ಯಕ್ಷ ಫಯಾಝ್ ಪಟ್ಲ, ಸಂಚಾಲಕ ಸಾಜಿದ್ ಉಳ್ಳಾಲ್ ಉಪಸ್ಥಿತರಿದ್ದರು.
ಉಳ್ಳಾಲ ಕ್ರಿಕೆಟ್ ಬೋರ್ಡ್ ಅಧ್ಯಕ್ಷ ಖಲೀಲ್ ಉಳ್ಳಾಲ್ ಸ್ವಾಗತಿಸಿದರು. ಅಬ್ದುಲ್ ಸಮದ್ ಕಾರ್ಯಕ್ರಮ ನಿರೂಪಿಸಿದರು.
Next Story





