ಉಳ್ಳಾಲ ಅಳೇಕಲ: ಮಹಿಳಾ ತರ್ಬಿಯತ್ ಕಾಲೇಜು ಉದ್ಘಾಟನೆ

ಮಂಗಳೂರು, ಜ.2: ಉಳ್ಳಾಲ ಅಳೇಕಲದ ನುಸ್ರತುಲ್ ಮಸಾಕೀನ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಮಹಿಳಾ ತರ್ಬಿಯತ್ ಕಾಲೇಜನ್ನು ಉಳ್ಳಾಲ ಕೇಂದ್ರ ಜುಮಾ ಮಸೀದಿ ಖತೀಬ್ ಅಬ್ದುಲ್ ಅಝೀಝ್ ಬಾಖವಿ ಇತ್ತೀಚೆಗೆ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು ಧಾರ್ಮಿಕ ಶಿಕ್ಷಣದ ಕೊರತೆಯಿಂದ ಮುಸ್ಲಿಂ ಸಮುದಾಯದ ಹೆಣ್ಣು ಮಕ್ಕಳು ದಾರಿ ತಪ್ಪುತ್ತಿದ್ದಾರೆ ಈ ನಿಟ್ಟಿನಲ್ಲಿ ಮಹಿಳಾ ತರ್ಬಿಯತ್ ಕಾಲೇಜು ಪ್ರಾರಂಭಿಸಿ ಯುವತಿಯರಿಗೆ ಧಾರ್ಮಿಕ ಶಿಕ್ಷಣ ನೀಡುತ್ತಿರುವ ನುಸ್ರತುಲ್ ಮಸಾಕೀನ್ ಚಾರಿಟೇಬಲ್ ಟ್ರಸ್ಟ್‌ನ ಕಾರ್ಯ ಶ್ಲಾಘನೀಯ ಎಂದರು.
ಉಳ್ಳಾಲ ಸೈಯದ್ ಮದನಿ ದರ್ಗಾದ ಅಧ್ಯಕ್ಷ ಹಾಜಿ ಅಬ್ದುಲ್ ರಶೀದ್ ಅಧ್ಯಕ್ಷತೆ ವಹಿದ್ದರು. ಮದನಿ ಅರಬಿಕ್ ಟ್ರಸ್ಟ್‌ನ ಪ್ರಾಂಶುಪಾಲ ಉಸ್ಮಾನ್ ಫೈಝಿ ತೋಡಾರ್ ದುಆ ನೆರವೇರಿಸಿದರು.
ದಅವಾ ಕಾಲೇಜಿನ ಪ್ರಾಂಶುಪಾಲ ಇಬ್ರಾಹೀಂ ಅಹ್ಸನಿ, ಕಾಲೇಜಿನ ಪ್ರೊಫೆಸರ್ ಇಬ್ರಾಹೀಂ ಮದನಿ, ಹಿಫ್ಝುಲ್ ಖುರ್‌ಆನ್ ಕಾಲೇಜಿನ ಪ್ರಾಂಶುಪಾಲ ಝೈನ್ ಸಖಾಫಿ, ಅರಬಿಕ್ ಕಾಲೇಜಿನ ಮುದರ್ರಿಸ್ ಸ್ವಾದಿಖ್ ಸಖಾಫಿ, ಅರಬಿಕ್ ಎಜುಕೇಶನ್ ಟ್ರಸ್ಟ್‌ನ ಕಾರ್ಯದರ್ಶಿ ಆಸೀಫ್ ಅಬ್ದುಲ್ಲ, ಚಾರಿಟೇಬಲ್ ಟ್ರಸ್ಟ್ ಉಪಾಧ್ಯಕ್ಷ ಮುಸ್ತಫ ಅಬ್ದುಲ್ಲ, ಹಾಜಿ ಇಬ್ರಾಹಿಂ ಕಕ್ಕೆತೋಟ, ಮದನಿ ಕಾಲೇಜು ಸಂಚಾಲಕ ಯು.ಎನ್.ಇಬ್ರಾಹೀಂ, ಉಳ್ಳಾಲ ನಗರಸಭೆ ಸದಸ್ಯರಾದ ಯು.ಎ.ಇಸ್ಮಾಯಿಲ್, ಅಯ್ಯೂಬ್ ಮಂಚಿಲ, ಅಸ್ಗರ್ ಆಲಿ, ನುಸ್ರತುಲ್ ಮಸಾಕೀನ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಹಾಜಿ ಮುಹಮ್ಮದ್ ತ್ವಾಹ, ಉಪಾಧ್ಯಕ್ಷ ಹಾಜಿ.ಯು.ಎಸ್.ಹನೀಫ್, ಕಾರ್ಯದರ್ಶಿ ಕೆ.ನ್.ಮುಹಮ್ಮದ್, ಜೊತೆ ಕಾರ್ಯದರ್ಶಿ ಯು.ಪಿ.ಹಮೀದ್, ಕೋಶಾಧಿಕಾರಿ ಅಬ್ದುಲ್ ಜಬ್ಬಾರ್, ಸದಸ್ಯರಾದ ಎ.ಎ. ಖಾದರ್, ಯು.ಕೆ.ಇಬ್ರಾಹೀಂ, ಎನ್.ಕೆ.ಅಹ್ಮದ್, ಅಬ್ದುಲ್ ಫತಾಕ್, ಯು.ಎಸ್.ನಝೀರ್, ಅಶ್ರಫ್, ಯು.ಡಿ.ಇಬ್ರಾಹೀಂ, ರಹ್ಮತ್ ಮತ್ತಿತರರು ಉಪಸ್ಥಿತರಿದ್ದರು.
ನುಸ್ರತುಲ್ ಮಸಾಕೀನ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಹಾಜಿ ಮುಹಮ್ಮದ್ ತ್ವಾಹ ವಂದಿಸಿದರು. ಅನುದಾನಿತ ಸೈಯದ್ ಮದನಿ ಉರ್ದು ಶಾಲೆಯ ಮುಖ್ಯ ಶಿಕ್ಷಕ ಕೆ.ಎಂ.ಕೆ. ಮಂಜನಾಡಿ ಕಾರ್ಯಕ್ರಮ ನಿರೂಪಿದರು.







