ರೌಡಿ ಮುಲಾಮನ ವಿರುದ್ಧ ಕೋಕಾ ದಾಖಲು ?
ಬೆಂಗಳೂರು, ಜ.2: ಗಂಭೀರ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪದಡಿ ಬಂಧಿತನಾಗಿರುವ ರೌಡಿ ಶೀಟರ್ ಲೋಕೇಶ್ ಯಾನೆ ಮುಲಾಮನ ವಿರುದ್ಧ ಕೋಕಾ ಆಕ್ಟ್ ಅಡಿ ಪ್ರಕರಣ ದಾಖಲು ಮಾಡಲು ಸಿಸಿಬಿ ಪೊಲೀಸರು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.
ಆರೋಪಿ ನಿರಂತರವಾಗಿ ಬೆದರಿಕೆ, ಅಪಹರಣ ಸೇರಿದಂತೆ ಅನೇಕ ಗಂಭೀರ ಅಪರಾಧ ಚಟುವಟಿಕೆಗಳ ಕೃತ್ಯದಲ್ಲಿ ಭಾಗಿಯಾಗಿದ್ದ ಹಿನ್ನೆಲೆಯಲ್ಲಿ ಸಂಘಟಿತ ಅಪರಾಧ ತಡೆ ಕಾಯ್ದೆ-2000 ಅಡಿ ಪ್ರಕರಣ ದಾಖಲು ಮಾಡಲು ಸಿಸಿಬಿ ಎಸಿಪಿ ಬಾಲರಾಜ್ ನೇತೃತ್ವದ ತಂಡ ತಯಾರಿ ನಡೆಸಿದೆ ಎಂದು ತಿಳಿದುಬಂದಿದೆ.
ಈ ಸಂಬಂಧ ಸಿಸಿಬಿ ಪೊಲೀಸರು ಇಲ್ಲಿವರೆಗೂ ಮುಲಾಮನ ಮೇಲಿರುವ ಎಲ್ಲ ಪ್ರಕರಣಗಳ ಮಾಹಿತಿ ಕಲೆ ಹಾಕುತ್ತಿದ್ದಾರೆ. ಸದ್ಯ ಬೆದರಿಕೆ ಪ್ರಕರಣ ಸಂಬಂಧ ಆರೋಪಿ 10 ದಿನದಿಂದ ಸಿಸಿಬಿ ಕಸ್ಟಡಿಯಲ್ಲಿದ್ದಾನೆ. ಆರೋಪಿ ವಿರುದ್ಧದ ವರದಿ ತಯಾರಿಸಿ ಕೋಕಾ ನ್ಯಾಯಾಲಯದಿಂದ ಅನುಮತಿ ಪಡೆಯಲು ಸಿಸಿಬಿ ತೀರ್ಮಾನಿಸಿದೆ ಎನ್ನಲಾಗಿದೆ.
Next Story





