ದನದ ಫೀಡ್ ತುಂಬಿದ ಗೋಣಿಚೀಲ ಮೈಮೇಲೆ ಬಿದ್ದು ಮೃತ್ಯು
ಕಾರ್ಕಳ, ಜ.2: ಟೆಂಪೊದಿಂದ ಖಾಲಿ ಮಾಡುತ್ತಿದ್ದ ದನದ ಫೀಡ್ ತುಂಬಿದ ಗೋಣಿ ಚೀಲಗಳು ಮೈಮೇಲೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ನೀರೆ ಗ್ರಾಮದ ನಿವಾಸಿ ಸಂತೋಷ ಶೆಟ್ಟಿ ಎಂಬವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಬಗ್ಗೆ ವರದಿಯಾಗಿದೆ.
ಇವರು ಡಿ.27ರಂದು ಬೆಳಿಗ್ಗೆ 11ಗಂಟೆಗೆ ಬೈಲೂರು ಪೇಟೆಯ ಭರತ್ ಕಿಣಿ ಎಂಬವರ ಜನರಲ್ ಮರ್ಚಂಟ್ ಜಿನಸು ಅಂಗಡಿಗೆ ಬಂದ ದನದ ಫೀಡ್ ತುಂಬಿದ ಗೋಣಿ ಚೀಲಗಳನ್ನು ಟೆಂಪೊದಿಂದ ಕೆಳಗೆ ಇಳಿಸುತ್ತಿದ್ದಾಗ ಆಕಸ್ಮಿಕವಾಗಿ ಗೋಣಿ ಚೀಲಗಳು ಅವರ ಮೈಮೇಲೆ ಬಿತ್ತೆನ್ನಲಾಗಿದೆ. ಇದ ರಿಂದ ಗಂಭೀರವಾಗಿ ಗಾಯಗೊಂಡು ಮಣಿಪಾಲ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಇವರು ಜ.1ರಂದು ಮಧ್ಯಾಹ್ನ 3ಗಂಟೆಗೆ ಸುಮಾರಿಗೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರೆನ್ನಲಾಗಿದೆ.
ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story