ಮಹಿಳೆಯರ ಶಬರಿಮಲೆ ಪ್ರವೇಶಕ್ಕೆ ಬಿಜೆಪಿ ಸಂಸದನ ಬೆಂಬಲ
ಶಬರಿಮಲೆ, ಜ.2: ಋತುಚಕ್ರ ವಯಸ್ಸಿನ ಮಹಿಳೆಯರು ಶಬರಿಮಲೆ ದೇವಾಲಯ ಪ್ರವೇಶಕ್ಕೆ ಬಿಜೆಪಿ ತೀವ್ರ ವಿರೋಧ ವ್ಯಕ್ತಪಡಿಸುತ್ತಿರುವ ನಡುವೆ ಬಿಜೆಪಿ ಟಿಕೆಟ್‌ನಿಂದ ವಾಯುವ್ಯ ದಿಲ್ಲಿಯ ಲೋಕಸಭಾ ಕ್ಷೇತ್ರದಲ್ಲಿ ವಿಜಯಿಯಾದ ಉದಿತ್ ರಾಜ್ ಬೆಂಬಲ ವ್ಯಕ್ತಪಡಿಸಿದ್ದಾರೆ.
ಮಹಿಳೆಯರು ಅಯ್ಯಪ್ಪ ದೇವಾಲಯ ಪ್ರವೇಶಿಸುವುದಕ್ಕೆ ನಾನು ಬೆಂಬಲ ವ್ಯಕ್ತಪಡಿಸುತ್ತೇನೆ. ಮಹಿಳೆಯಿಂದಲೇ ಪುರುಷನ ಜನನ ಆಗುತ್ತದೆ. ಹಾಗಾದರೆ ಮಹಿಳೆಯ ಅಶುದ್ಧ ಆಗಲು ಹೇಗೆ ಸಾಧ್ಯ. ದೇವರು ಸರ್ವವ್ಯಾಪಿ ಹಾಗೂ ಅವನು ಎಲ್ಲೆಲ್ಲಿಯೂ ಇದ್ದಾನೆ. ಸಂವಿಧಾನದ ಕಣ್ಣಲ್ಲಿ ಎರಡೂ ಲಿಂಗಗಳು ಸಮಾನ ಎಂದು ಉದಿತ್ ರಾಜ್ ಟ್ವೀಟ್ ಮಾಡಿದ್ದಾರೆ.
Next Story