ಬೆಂಗಳೂರು: ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ

ಬೆಂಗಳೂರು, ಜ.2: ಅಪರಿಚಿತ ವ್ಯಕ್ತಿಯೊಬ್ಬನ ಮೃತ ದೇಹ ಪತ್ತೆಯಾಗಿದ್ದು, ವಾರಸುದಾರರು ಇಲ್ಲಿನ ಹಲಸೂರು ಗೇಟ್ ಪೊಲೀಸ್ ಠಾಣೆಗೆ ಸಂಪರ್ಕಿಸಬಹುದು.
60 ವರ್ಷದ ವ್ಯಕ್ತಿಯೋರ್ವರು ರಸ್ತೆ ಬದಿ ಅಸ್ವಸ್ಥನಾಗಿ ಬಿದ್ದಿದ್ದನ್ನು ಕಂಡು, ಡಿ.29ರಂದು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತ ಪಟ್ಟಿದ್ದಾರೆ. ನೋಡಲು ಭಿಕ್ಷುಕನಂತೆ ಕಂಡು ಬರುತ್ತಿದ್ದು, ಇವರ ವಾರಸುದಾರರು ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಸುಮಾರು 5.6 ಅಡಿ ಎತ್ತರ, ದುಂಡುಮುಖ, ಗೋಧಿ ಮೈಬಣ್ಣ, ಬೋಳುತಲೆ, ಸಣಕಲು ದೇಹ ಹಾಗೂ ಬಿಳಿ ದಾಡಿ ಇದೆ. ಮೃತರ ಬಗ್ಗೆ ಯಾರಿಗಾದರೂ ಮಾಹಿತಿ ಇದ್ದರೆ ಹಲಸೂರು ಗೇಟ್ ಪೊಲೀಸ್ ಠಾಣೆ ಅಥವಾ ಮೊಬೈಲ್ ಸಂಖ್ಯೆ 94808 01115, ದೂರವಾಣಿ ಸಂಖ್ಯೆ 080- 22943003 ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.
Next Story





