ನದಿ ಉತ್ಸವಕ್ಕೆ ಸಿದ್ಧತೆ: ಭರದಿಂದ ಸಾಗಿದ ಕಾಮಗಾರಿ

ಮಂಗಳೂರು, ಜ.2: ದ.ಕ. ಜಿಲ್ಲಾ ವ್ಯಾಪ್ತಿಯ ಕಡಲತೀರಗಳನ್ನು ಅಭಿವೃದ್ಧಿ ಮಾಡುವ ಮೂಲಕ ಪ್ರವಾಸೋದ್ಯಮಕ್ಕೆ ಉತ್ತೇಜನ ಹಾಗೂ ನದಿ ಸಂರಕ್ಷಣೆಗೆ ಒತ್ತು ನೀಡುವ ಉದ್ದೇಶದಿಂದ ಜಿಲ್ಲಾಡಳಿತವು ಜ.12 ಮತ್ತು 13ರಂದು ಫಲ್ಗುಣಿ ನದಿ ತೀರದಲ್ಲಿ ನದಿ ಉತ್ಸವಕ್ಕೆ ಸಿದ್ಧತೆ ನಡೆಯುತ್ತಿದ್ದು, ಕಾಮಗಾರಿಗಳು ಭರದಿಂದ ಸಾಗಿವೆ.
ನಗರದ ಬಂಗ್ರಕೂಳೂರು ಬಳಿ ಸರಕಾರದ 20 ಎಕರೆ ಜಾಗದಲ್ಲಿ ನದಿ ಉತ್ಸದ ನಡೆಯಲಿದೆ. ಈ ಖಾಲಿ ಜಾಗವು ಕಲ್ಲು, ಮಣ್ಣು, ತಗ್ಗು-ದಿಬ್ಬದಿಂದ ಕೂಡಿದ್ದು, ಜಾಗವನ್ನು ಸ್ವಚ್ಛಗೊಳಿಸಿ ಮರಳನ್ನು ಸುರಿದು ಹಸನುಗೊಳಿಸಲಾಗುತ್ತಿದೆ. ಜೆಸಿಬಿಯಿಂದ ನದಿ ತೀರದಲ್ಲಿನ ಹೂಳನ್ನು ಹೊರ ತೆಗೆದು ಟಿಪ್ಪರ್ ಲಾರಿಗಳಲ್ಲಿ ತುಂಬಿಸಿ ಸಾಗಿಸಲಾಗುತ್ತಿದ್ದು, ಕಾಮಗಾರಿಗಳು ಚುರುಕು ಪಡೆದುಕೊಂಡಿವೆ.
Next Story