ಪ್ರವಾದಿ ನಿಂದನೆ, ಇಮಾಮ್ಸ್ ಕೌನ್ಸಿಲ್ ವತಿಯಿಂದ ಜಿಲ್ಲಾಧಿಕಾರಿಗೆ ಮನವಿ

ಮಂಗಳೂರು, ಜ. 2: ಸುವರ್ಣ ಕನ್ನಡ ಸುದ್ದಿವಾಹಿಣಿಯ ನಿರೂಪಕ ಅಜಿತ್ ವಿಶ್ವ ಪ್ರವಾದಿಯನ್ನು ನಿಂದನೆಗೈದು ಅವಮಾನಿಸಿದ್ದು ನಮ್ಮ ದಾರ್ಮಿಕ ನಂಬಿಕೆಗೆ ದಕ್ಕೆ ಉಂಟು ಮಾಡಿದ್ದಾರೆ. ಯಾವುದೇ ಧರ್ಮದ ಬಗ್ಗೆ ಅವಹೇಳನ ಮಾಡುವುದು ಅಪರಾಧವಾಗಿದ್ದು, ಪ್ರವಾದಿಯನ್ನು ನಿಂದಿಸಿದ ಅಜಿತ್ ಮತ್ತು ಆ ಚಾನೆಲ್ ನ ವ್ಯವಸ್ಥಾಪಕರ ಮೇಲೆ ಕೇಸು ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ ದಕ ಜಿಲ್ಲೆ ವತಿಯಿಂದ ಜಿಲ್ಲಾಧಿಕಾರಿ ಮುಖಾಂತರ ರಾಜ್ಯ ಗೃಹ ಸಚಿವರಿಗೆ ಮನವಿ ನೀಡಲಾಯಿತು.
ಈ ಸಂದರ್ಭ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಫೀಕ್ ದಾರಿಮಿ, ಅಬ್ದುಲ್ ಖಾದರ್ ಪೈಝಿ, ಉಸ್ಮಾನ್ ಸಅದಿ, ಮೌಲಾನ ಇಬ್ರಾಹಿಮ್ ಮತ್ತಿತರರು ಉಪಸ್ಥಿತರಿದ್ದರು.
Next Story