ವಿಟ್ಲ : ಬುರೂಜ್ ಶಾಲಾ ವಾರ್ಷಿಕೋತ್ಸವ

ವಿಟ್ಲ, ಜ. 2 : ಮಕ್ಕಳು ಮಾದಕ ವಸ್ತುಗಳಿಗೆ ಬಲಿಯಾಗದಂತೆ ಪೋಷಕರು ಹೆಚ್ಚಿನ ನಿಗಾ ವಹಿಸಬೇಕಾಗಿದೆ ಎಂದು ಪೂಂಜಾಲಕಟ್ಟೆ ಪೊಲೀಸ್ ಠಾಣಾಧಿಕಾರಿ ಸೌಮ್ಯಾ ಜಿ. ಹೇಳಿದರು.
ಕಲಾಬಾಗಿಲು ರಝಾನಗರದ ಬುರೂಜ್ ಆಂಗ್ಲ ಮಾಧ್ಯಮ ಶಾಲೆಯ 19ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು ಮಕ್ಕಳ ಶೈಕ್ಷಣಿಕ ಅಭಿವೃದ್ದಿ ನಿಟ್ಟಿನಲ್ಲಿ ಶಾಲೆಗಳಿಗಿಂತಲೂ ಮನೆಯ ವಾತಾವರಣ ಹೆಚ್ಚಿನ ಪ್ರಾಮುಖ್ಯವನ್ನು ಪಡೆಯುತ್ತದೆ ಎಂದರು.
ಪೂಂಜಾಲಕಟ್ಟೆ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯಾಧಿಕಾರಿ ಡಾ. ಸತೀಶ್ ಉದ್ಘಾಟಿಸಿದರು. ಜಿ.ಪಂ. ಸದಸ್ಯ ಬಿ. ಪದ್ಮಶೇಖರ ಜೈನ್, ತಾ.ಪಂ. ಉಪಾಧ್ಯಕ್ಷ ಬಿ.ಎಂ. ಅಬ್ಬಾಸ್ ಅಲಿ, ಸದಸ್ಯ ರಮೇಶ್ ಕುಡುಮೇರು, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ನವಾಝ್ ಟಿ.ಕೆ., ರಝಾನಗರ ಕಮರುಲ್ ಇಸ್ಲಾಂ ಮಸೀದಿ ಅಧ್ಯಕ್ಷ ಹಸನ್ ಸಾಹೇಬ್, ಪೂಂಜಾಲಕಟ್ಟೆ ಪಿ.ವಿ.ಎಸ್. ಸಹಕಾರಿ ಬ್ಯಾಂಕ್ ನಿರ್ದೇಶಕ ಸೀತಾರಾಮ ಶೆಟ್ಟಿ ಸೇವಾ, ಪತ್ರಕರ್ತ ಲತೀಫ್ ನೇರಳಕಟ್ಟೆ, ಇರ್ವತ್ತೂರು ಗ್ರಾ.ಪಂ. ಸದಸ್ಯ ಸುಧೀರ್ ಶೆಟ್ಟಿ, ಸಿವಿಲ್ ಕಂಟ್ರಾಕ್ಟರ್ ಮೋಹನ್ ಶೆಟ್ಟಿ, ಇರ್ವತ್ತೂರು ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷ ಅಬೂಬಕರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಪ್ರೌಢಶಾಲಾ ವಿದ್ಯಾರ್ಥಿ ನಾಯಕ ಮುಹಮ್ಮದ್ ಇಶಾನ್, ಪ್ರಾಥಮಿಕ ಶಾಲಾ ವಿದ್ಯಾರ್ಥಿ ನಾಯಕಿ ಸಾರಿಕಾ, ಶಿಕ್ಷಕ-ರಕ್ಷಕ ಸಂಘದ ಉಪಾಧ್ಯಕ್ಷೆ ಉಷಾ ಪಿ. ಶೆಟ್ಟಿ, ಶಾಲಾ ಉಪನಾಯಕರಾದ ನಿಮ್ರಾ ಬಾನು, ಸಿದ್ದಾರ್ಥ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಎಚ್.ಎ. ಖದೀರ್ ಮೊದಲಾದವರು ಉಪಸ್ಥಿತರಿದ್ದರು.
ಶಾಲಾ ಸಂಚಾಲಕ ಶೇಖ್ ರಹ್ಮತುಲ್ಲಾ ಸ್ವಾಗತಿಸಿ, ಶಾಲಾ ಮುಖ್ಯ ಶಿಕ್ಷಕಿ ಪ್ರಸ್ತಾವನೆಗೈದರು. ಸಹಶಿಕ್ಷಕಿ ಶಾಲಿನಿ ವಂದಿಸಿದರು.