ನೇರಳಕಟ್ಟೆ ವಾಲಿಬಾಲ್ ಪಂದ್ಯಾಟ : ಅಡ್ಲಬೆಟ್ಟು ತಂಡಕ್ಕೆ ಪ್ರಶಸ್ತಿ

ವಿಟ್ಲ, ಜ. 2: ಪೆರಾಜೆ-ನೇರಳಕಟ್ಟೆಯ ಶ್ರೀ ಗುಡ್ಡಚಾಮುಂಡೇಶ್ವರಿ ಹಾಗೂ ಯುವ ಕೇಸರಿ ಪ್ರೆಂಡ್ಸ್ ಇದರ ವತಿಯಿಂದ ಆಹಾನಿತ ತಂಡಗಳ ಲೀಗ್ ಮಾದರಿಯ ವಾಲಿಬಾಲ್ ಪಂದ್ಯಾಟವು ನೇರಳಕಟ್ಟೆಯ ದಿ. ಇಂದುಹಾಸ ರೈ ಕ್ರೀಡಾಂಗಣದಲ್ಲಿ ನಡೆಯಿತು.
ಪಂದ್ಯಾಟವನ್ನು ಡಾ. ವೈ. ಗಣರಾಜ ಎಲ್ಕಣ ಉದ್ಘಾಟಿಸಿದರು. ಪ್ರಗತಿಪರ ಕೃಷಿಕ ಸುರೇಶ್ ರೈ ಕುರ್ಲೆತ್ತಿಮಾರು ಅಧ್ಯಕ್ಷತೆ ವಹಿಸಿದ್ದರು. ನೇರಳಕಟ್ಟೆ ಸಿ.ಎ. ಬ್ಯಾಂಕ್ ಉಪಾಧ್ಯಕ್ಷ ಕುಶಲ ಎಂ. ಪೆರಾಜೆ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಿನಕರ ನಾಯಕ್, ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷ ವಿನೀತ್ ಶೆಟ್ಟಿ, ಮಾಣಿ ಕರ್ನಾಟಕ ಪದವಿಪೂರ್ವ ಕಾಲೇಜು ಉಪನ್ಯಾಸಕಿ ರಶ್ಮಿತಾ ಸುರೇಶ್, ಉದ್ಯಮಿ ನಿರಂಜನ್ ರೈ ಕುರ್ಲೆತ್ತಿಮಾರು, ನೆಟ್ಲಮುಡ್ನೂರು ಗ್ರಾ.ಪಂ. ಸದಸ್ಯ ಡಿ. ತನಿಯಪ್ಪ ಗೌಡ, ನಿವೃತ್ತ ಮುಖ್ಯ ಶಿಕ್ಷಕ ರಾಮಚಂದ್ರ ಮಾಸ್ಟರ್, ಗಣೇಶನಗರ ಯಂಗ್ ಚಾಲೆಂಜರ್ಸ್ ಅಧ್ಯಕ್ಷ ವಿಶು ಕುಮಾರ್ ಎನ್., ನಾಟಿ ವೈದ್ಯ ಗಂಗಾಧರ ಪಂಡಿತ್ ಗೋಳಿಕಟ್ಟೆ, ನಾರಾಯಣ ಕುಲಾಲ್ ಮಿತ್ತ ಪೆರಾಜೆ, ಪ್ರಶಾಂತ್ ಕೆ.ಆರ್. ಸಂಗಮ್ ಬ್ರದರ್ಸ್, ನೇರಳಕಟ್ಟೆ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ಭೋಜ ನಾರಾಯಣ, ಸಿವಿಲ್ ಕಂಟ್ರಾಕ್ಟರ್ ಹರೀಶ್ ಪೂಜಾರಿ ಮುಜಲ ಮೊದಲಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಆರ್‍ಟಿಒ ಪದ್ಮನಾಭ ಕುಲಾಲ್ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ನೆಟ್ಲಮುಡ್ನೂರು ಗ್ರಾ.ಪಂ. ಸದಸ್ಯ ಲತೀಫ್ ನೇರಳಕಟ್ಟೆ ಬಹುಮಾನ ವಿತರಿಸಿದರು. ಕಿಟ್ಟಣ್ಣ ಶೆಟ್ಟಿ ಮಾದೇಲು, ಮಂಜುನಾಥ ಕಲ್ಲೋಳಿಗುಡ್ಡೆ, ಶಶಿಧರ ಕುಲಾಲ್ ಪೆರಾಜೆ, ಎನ್.ಎಚ್. ಇಸ್ಮಾಯಿಲ್ ಮೊದಲಾದವರು ಉಪಸ್ಥಿತರಿದ್ದರು. ಗುರುಕಿರಣ್ ಹಾಗೂ ಅನೂಪ್ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರು.
ಗುಡ್ಡಚಾಮುಂಡೇಶ್ವರಿ ಫ್ರೆಂಡ್ಸ್ ಅಧ್ಯಕ್ಷ ಚಂದ್ರಶೇಖರ ಸ್ವಾಗತಿಸಿ, ಯುವ ಕೇಸರಿ ಫ್ರೆಂಡ್ಸ್ ಅಧ್ಯಕ್ಷ ಪ್ರದೀಪ್ ವಂದಿಸಿದರು. ಸತೀಶ್ ಅನಂತಾಡಿ ಹಾಗೂ ಶಾಕಿರ್ ನೇರಳಕಟ್ಟೆ ಕಾರ್ಯಕ್ರಮ ನಿರೂಪಿಸಿದರು.
ಅಡ್ಲಬೆಟ್ಟು ತಂಡಕ್ಕೆ ಪ್ರಶಸ್ತಿ
ಆಹ್ವಾನಿತ ತಂಡಗಳ ಲೀಗ್ ಮಾದರಿಯ ವಾಲಿಬಾಲ್ ಪಂದ್ಯಾಟದಲ್ಲಿ ಸತ್ಯದೇವತಾ ಅಡ್ಲಬೆಟ್ಟು ತಂಡವು ಪ್ರಥಮ ಸ್ಥಾನ, ಉದಯ ಯುವಕ ಮಂಡಲ ಶೇರಾ ದ್ವಿತೀಯ, ಯುವಕ ಮಂಡಲ ಮಾಣಿ ತಂಡವು ತೃತೀಯ ಹಾಗೂ ಸತ್ಯಶ್ರೀ ಗೆಳೆಯರ ಬಳಗ ಬೊಳ್ಳಾರು ತಂಡ ಚತುರ್ಥ ಸ್ಥಾನವನ್ನು ಪಡೆದುಕೊಂಡಿತು. ಶೇರಾ ತಂಡದ ರಾಮ ಉತ್ತಮ ಹೊಡೆತಗಾರ, ಅಡ್ಲಬೆಟ್ಟು ತಂಡದ ಶಿವರಾಮ ಉತ್ತಮ ಎತ್ತುಗಾರ ಹಾಗೂ ಪ್ರಿಯೇಶ್ ಸವ್ಯಸಾಚಿ ಪ್ರಶಸ್ತಿಗಳನ್ನು ಪಡೆದುಕೊಂಡರು.