ಜ.6: ಎಲ್ಲೈಸಿ ಎಸ್‌ಸಿ/ಎಸ್‌ಟಿ, ಎನ್‌ಬಿ ನೌಕರರ ಸಮಾವೇಶ
ಉಡುಪಿ, ಜ.3: ಭಾರತೀಯ ಜೀವವಿಮಾ ನಿಗಮದ ಉಡುಪಿ, ಮಂಗಳೂರು ಹಾಗೂ ಚಿಕ್ಕಮಗಳೂರು ಜಿಲ್ಲೆಯ ವಿಭಾಗೀಯ ಮಟ್ಟದ 8ನೇ ಎಸ್‌ಸಿ/ಎಸ್‌ಟಿ ಮತ್ತು ನವಬೌಧ್ಧ ನೌಕರರ ಕ್ಷೇಮಾಭಿವೃಧ್ಧಿ ಸಂಘದ ಸಮಾವೇಶ ಜ.6ರಂದು ನಗರದ ಬ್ರಹ್ಮಗಿರಿ ಲಯನ್ಸ್ ಭವನದಲ್ಲಿ ನಡೆಯಲಿದೆ.
ಬೆಳಗ್ಗೆ 10:30ಕ್ಕೆ ಈ ಸಮಾವೇಶವನ್ನು ಭಾರತೀಯ ಜೀವವಿಮಾ ನಿಗಮದ ಉಡುಪಿ ವಿಭಾಗೀಯ ಕಛೇರಿಯ ಹಿರಿಯ ಅಧಿಕಾರಿ ಪಿ.ವಿಶ್ವೇಶ್ವರ ರಾವ್ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಸೋಮ್ಲ ನಾಯ್ಕ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಾರುಕಟ್ಟೆ ವ್ಯವಸ್ಥಾಪಕ ವೆಂಕಟರಮಣ ಶಿರೂರು, ಮೆನೇಜರ್ ಶಶಿಕಲಾ ಎಸ್.ಕೆ, ಉಡುಪಿ ನಗರಸಭಾ ಆಯುಕ್ತ ಆನಂದ ಬಿ. ಕಲ್ಲೋಲಿ ಕರ್, ದೀಪ್ಲ ನಾಯ್ಕ, ವಲಯ ಮಟ್ಟದ ಎಸ್‌ಎಟಿ ಅಧ್ಯಕ್ಷ ಸಿದ್ದಾರ್ಥನ್, ಕಾರ್ಯದರ್ಶಿ ಸುಬಾಸ್ ಕುಮಾರ್ ಹಾಗೂ ದಲಿತ ಚಿಂತಕ ಜಯನ್ ಮಲ್ಪೆ ಭಾಗವಹಿಸಲಿದ್ದಾರೆ.
ಸಮಾವೇಶದ ಬಳಿಕ ಎಸ್‌ಸಿ/ಎಸ್‌ಟಿ ನೌಕರರ ವಿಶೇಷ ಸಬೆ ನಡೆಯಲಿದೆ ಎಂದು ಅಧ್ಯಕ್ಷರಾದ ಸೋಮ್ಲ ನಾಯ್ಕ ಮತ್ತು ಸುರೇಶ್ ಕುಮಾರ್ ತಿಳಿಸಿದ್ದಾರೆ.
Next Story