ಮಹಾಮುಷ್ಕರದ ಪ್ರಚಾರ ಜಾಥಕ್ಕೆ ಚಾಲನೆ

ಕುಂದಾಪುರ, ಜ.3: ಕೇಂದ್ರ ಸರಕಾರದ ಜನ ವಿರೋಧಿ ನೀತಿಗಳ ವಿರುದ್ಧ ಜ.8 ಮತ್ತು 9ರಂದು ನಡೆಯಲಿರುವ ಅಖಿಲ ಭಾರತ ಸಾರ್ವತ್ರಿಕ ಮುಷ್ಕರ ಇದರ ಪ್ರಚಾರ ಜಾಥಕ್ಕೆ ಇಂದು ಕುಂದಾಪುರ ಶಾಸ್ತ್ರಿ ಸರ್ಕಲ್ನಲ್ಲಿ ಚಾಲನೆ ನೀಡಲಾಯಿತು.
ಕುಂದಾಪುರ ಐಎನ್‌ಟಿಯುಸಿ, ಸಿಐಟಿಯು, ಇತರ ಜನಪರ ಸಂಘಟನೆಗಳ ಜಂಟಿ ಸಮಿತಿಯ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿರುವ ಪ್ರಚಾರ ಜಾಥವನ್ನು ಜೆಸಿಟಿಯು ಮುಖಂಡ ಎಚ್.ನರಸಿಂಹ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಇಂಟಕ್ ಅಧ್ಯಕ್ಷ ಲಕ್ಷ್ಮಣ್ ಶೆಟ್ಟಿ, ಮಾಣಿ ಉದಯ ಕುಮಾರ್, ಸಿಐಟಿಯು ಮುಖಂಡ ಸುರೇಶ್ ಕಲ್ಲಾಗರ, ಆಟೊರಿಕ್ಷಾ ಸಂಘ ಟನೆಯ ರಾಜು ದೇವಾಡಿಗ, ಡಿವೈಎಫ್‌ಐ ಮುಖಂಡ ರಾಜೇಶ್ ವಡೇರ ಹೋಬಳಿ ಮೊದಲಾದವರು ಉಪಸ್ಥಿತರಿದ್ದರು.
ಕಟ್ಟಡ ಕಾರ್ಮಿಕ ಸಂಘಟನೆಯ ಮುಖಂಡ ರಮೇಶ್ ಗುಲ್ವಾಡಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ರಮೇಶ್ ವಿ. ವಂದಿಸಿದರು.
Next Story





