ಸೇನಾಧಿಕಾರಿ ಪತಿಯೊಂದಿಗೆ ಪ್ರೇಮ ಸಂಬಂಧ: ಸೇನೆಯ ಕರ್ನಲ್‌ಗೆ ಕೋರ್ಟ್ ಮಾರ್ಷಲ್
ಹೊಸದಿಲ್ಲಿ, ಜ. 3: ಇನ್ನೋರ್ವ ಸೇನಾಧಿಕಾರಿಯ ಪತ್ನಿಯ ಜೊತೆಗೆ ಪ್ರೇಮ ಸಂಬಂಧ ಇರಿಸಿಕೊಂಡಿದ್ದ ಆರೋಪದ ಹಿನ್ನೆಲೆಯಲ್ಲಿ ಭಾರತೀಯ ಸೇನಾಧಿಕಾರಿ ಒಬ್ಬರು ಸಾಮಾನ್ಯ ಕೋರ್ಟ್ ಮಾರ್ಷಲ್ ಎದುರಿಸಲಿದ್ದಾರೆ.
ಆರೋಪಿ ಸೇನಾಧಿಕಾರಿಯನ್ನು ದಿಲ್ಲಿಗೆ ನಿಯೋಜಿಸಿದ ಸಂದರ್ಭ ಅದೇ ನಗರದಲ್ಲಿ ನಿಯೋಜಿತರಾಗಿದ್ದ ಅವರ ಸಹವರ್ತಿ ಸೇನಾಧಿಕಾರಿ ಪತ್ನಿಯ ಜೊತೆಗೆ ಅವರು ಪ್ರೇಮ ಸಂಬಂಧ ಹೊಂದಿದ್ದರು ಎಂದು ಆರೋಪಿಸಲಾಗಿದೆ. ತನ್ನ ಪತ್ನಿಯ ಮೊಬೈಲ್ ಫೋನ್‌ನಲ್ಲಿ ಆಕ್ಷೇಪಾರ್ಹ ದೃಶ್ಯಾವಳಿಗಳನ್ನು ನೋಡಿದ ಬಳಿಕ ಕರ್ನಲ್ ಅವರು ದೂರು ದಾಖಲಿಸಿದ್ದರು. ಅನಂತರ ಆರೋಪಿಯ ವಿರುದ್ಧ ತನಿಖೆ ಆರಂಭಿಸಲಾಗಿತ್ತು.
ಈ ತನಿಖೆ ಕಳೆದ ಎರಡು ವರ್ಷಗಳಿಂದ ನಡೆಯುತ್ತಿದೆ. ಇತ್ತೀಚೆಗೆ ಪ್ರಾಧಿಕಾರ ಅಧಿಕಾರಿಯನ್ನು ಕೋರ್ಟ್ ಮಾರ್ಷಲ್‌ಗೆ ಒಳಪಡಿಸುವಂತೆ ಶಿಫಾರಸು ಮಾಡಿತ್ತು.
Next Story