ಎಂ. ಫ್ರೆಂಡ್ಸ್, ಜಾಗತಿಕ ಬಂಟರ ಸಂಘಗಳ ಒಕ್ಕೂಟದಿಂದ ಮನ್ಸೂರ್ ಆಝಾದ್ ಗೆ ಸನ್ಮಾನ

ಮಂಗಳೂರು, ಜ. 3: ವೆನ್ಲಾಕ್ ಜಿಲ್ಲಾಸ್ಪತ್ರೆಯಲ್ಲಿ ಎಂ.ಫ್ರೆಂಡ್ಸ್ ವತಿಯಿಂದ ರೋಗಿಗಳ ಜೊತೆಗಾರರಿಗೆ ಪ್ರತಿದಿನ ನೀಡುವ ಆಹಾರದ ಕಾರುಣ್ಯ ಯೋಜನೆಗೆ 15 ದಿವಸದ ಪ್ರಾಯೋಜಕತ್ವ ನೀಡಿರುವ ಮಂಗಳೂರಿನ ಉದ್ಯಮಿ, ಸಂಘಟಕ ಆಝಾದ್ ಹಾರ್ಡ್ ವೇರ್ಸ್ ನ ಮನ್ಸೂರ್ ಆಝಾದ್ ಅವರನ್ನು ಸನ್ಮಾನಿಸಲಾಯಿತು.
ಇತ್ತೀಚೆಗೆ ಮಂಗಳೂರು ವೆನ್ಲಾಕ್ ಆಸ್ಪತ್ರೆಯ ವಠಾರದಲ್ಲಿ ನಡೆದ ಎಂ. ಫ್ರೆಂಡ್ಸ್ ಹಾಗೂ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಜಂಟಿ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಬಿ. ರಮಾನಾಥ ರೈ ಅವರು ಮನ್ಸೂರ್ ಆಝಾದ್ ರನ್ನು ಸನ್ಮಾನಿಸಿದರು.
ಜಾಗತಿಕ ಬಂಟರ ಸಂಘಗಳ ಒಕ್ಕೂಟ ಒಂದು ತಿಂಗಳ ಕಾರುಣ್ಯ ಪ್ರಾಯೋಜಕತ್ವ ನೀಡಿದ್ದು, ಅದರ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿಯವರನ್ನೂ ಈ ಸಂದರ್ಭ ಸನ್ಮಾನಿಸಲಾಯಿತು.
ಶಾಸಕರಾದ ವೇದವ್ಯಾಸ ಕಾಮತ್, ಮೇಯರ್ ಭಾಸ್ಕರ್ ಕೆ., ವೆನ್ಲಾಕ್ ಅಧೀಕ್ಷಕಿ ಡಾ. ರಾಜೇಶ್ವರಿ ದೇವಿ, ಎಂ.ಫ್ರೆಂಡ್ಸ್ ಅಧ್ಯಕ್ಷ ಮಹಮ್ಮದ್ ಹನೀಫ್ ಗೋಳ್ತಮಜಲು, ಕಾರ್ಯದರ್ಶಿ ರಶೀದ್ ವಿಟ್ಲ, ಎನ್ನಾರೈ ಸದಸ್ಯ ಡಾ. ಖಾಸಿಮ್, ಹಮೀದ್ ಅತ್ತೂರು ಮೊದಲಾದವರು ಈ ಸಂದರ್ಭ ಉಪಸ್ಥಿತರಿದ್ದರು.
ಹಮೀದ್ ಕಲ್ಲಡ್ಕ ಕಾರ್ಯಕ್ರಮ ನಿರೂಪಿಸಿದರು.