ಸಿಪಿಐ ಪಕ್ಷದ ಕಚೇರಿಗೆ ಬೆಂಕಿ: ಸಿಪಿಎಂ ಖಂಡನೆ
ಮಂಗಳೂರು, ಜ.3: ಸಿಪಿಐ ಪಕ್ಷದ ಬಂಟ್ವಾಳ ತಾಲೂಕು ಸಮಿತಿಯ ಕಚೇರಿಗೆ ಬುಧವಾರ ರಾತ್ರಿ ಬೆಂಕಿ ಹಚ್ಚಿರುವ ಘಟನೆಯನ್ನು ಸಿಪಿಎಂ ದ.ಕ.ಜಿಲ್ಲಾ ಸಮಿತಿ ಖಂಡಿಸಿದೆ.
2014ರಲ್ಲಿ ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಆಡಳಿತಕ್ಕೆ ಬಂದ ಬಳಿಕ ಪಶ್ಚಿಮ ಬಂಗಾಳ, ತ್ರಿಪುರಾ, ಕೇರಳ, ಪಂಜಾಬ್ ಹಾಗೂ ಕರ್ನಾಟಕದ ಎಡಪಂಥೀಯರ ಕಚೇರಿಗಳನ್ನು ಹಾನಿಗೊಳಿಸಿ ಪ್ರಜಾಪ್ರಭುತ್ವ ಚಳುವಳಿಗಳನ್ನು ಹತ್ತಿಕ್ಕುವ ಕೃತ್ಯಗಳು ನಡೆಯುತ್ತಿವೆ. ಇದೀಗ ಬಂಟ್ವಾಳ ಸಿಪಿಐ ಕಚೇರಿಯ ಮೇಲೆ ಈ ರೀತಿಯ ದುಷ್ಕೃತ್ಯ ಎಸಗಿದೆ. ಪೊಲೀಸ್ ಇಲಾಖೆ ಹಾಗೂ ಸರಕಾರ ದುಷ್ಕರ್ಮಿಗಳನ್ನು ಕೂಡಲೇ ಬಂಧಿಸಿ ಶಿಕ್ಷೆಗೊಳಪಡಿಸಬೇಕೆಂದು ಸಿಪಿಎಂ ಒತ್ತಾಯಿಸಿದೆ.
Next Story





